-ಮನೆಯಲ್ಲಿದಿದ್ದು 3 ಜನ, ಬೆಳಗ್ಗೆ ಸೋದರಿಗೆ ಫೋನ್
ಮುಂಬೈ: ಆತ್ಮಹತ್ಯೆಗೆ ಶರಣಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಏನು ನಡೆದಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಆತ್ಮಹತ್ಯೆ ವೇಳೆ ಮನೆಯಲ್ಲಿ ಮೂರು ಜನರಿದ್ದರು ಎಂದು ತಿಳಿದು ಬಂದಿದೆ. ಮೂವರಲ್ಲಿ ಓರ್ವ ಗೆಳೆಯ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
Advertisement
ಖಿನ್ನತೆಗೆ ಒಳಗಾಗಿದ್ದ ಸುಶಾಂತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಲಾಗುತ್ತಿದೆ.
Advertisement
Advertisement
ಯಾರು ಆ ಮೂವರು?: ಸುಶಾಂತ್ ಸಿಂಗ್ ತಮ್ಮ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇತ್ತ ಮನೆಯಲ್ಲಿ ಮೂವರಿದ್ದರು. ಅಡುಗೆಯವ, ಕ್ರಿಯೇಟಿವ್ ಮ್ಯಾನೇಜರ್ ಮತ್ತು ಓರ್ವ ಗೆಳೆಯ ಸುಶಾಂತ್ ಮನೆಯಲ್ಲಿಯೇ ಇದ್ದರು.
Advertisement
ಕೊನೆಯ ಮೂರು ಗಂಟೆ: ಇಂದು ಬೆಳಗ್ಗೆ ಸುಮಾರು 6.30ಕ್ಕೆ ಎದ್ದ ಸುಶಾಂತ್ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿಕೊಂಡಿದ್ದರು. ಆದ್ರೆ ಮನೆಯಲ್ಲಿ ಯಾರಿಗೂ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಯಾವ ಸುಳಿವು ಸಹ ಸಿಕ್ಕಿರಲಿಲ್ಲ ಎಂದು ಗೆಳೆಯ ಹೇಳುತ್ತಾರೆ.
ಬೆಳಗ್ಗೆ 6.30ಕ್ಕೆ ಎದ್ದ ಸುಶಾಂತ್ ಎಂದಿನಂತೆಯೇ ಇದ್ದರು. ಬೆಳಗ್ಗೆ 9.30ಕ್ಕೆ ಮನೆಯ ಕೆಲಸದವ ನೀಡಿದ ದಾಳಿಂಬೆ ಜ್ಯೂಸ್ ಕುಡಿದಿದ್ದಾರೆ. ನಂತರ ಸೋದರಿಗೆ ಫೋನ್ ಮಾಡಿ ಕೆಲ ಸಮಯ ಮಾತನಾಡಿ ಕೋಣೆ ಸೇರಿಕೊಂಡಿದ್ದರು. ಊಟಕ್ಕೆ ಕರೆದಾಗ ಸುಶಾಂತ್ ಯಾವುದೇ ಬಾಗಿಲು ತೆರೆದಿಲ್ಲ. ನಂತರ ಮಧ್ಯಾಹ್ನ 2-3 ಗಂಟೆಯಾದ್ರೂ ಬಾಗಿಲು ತೆರೆಯದಿದ್ದಾಗ ಮನೆಯಲ್ಲಿದ್ದ ಮ್ಯಾನೇಜರ್ ಸುಶಾಂತ್ ಸೋದರಿಗೆ ಫೋನ್ ಮಾಡಿದ್ದಾರೆ. ವಿಷಯ ತಿಳಿದು ಮನೆಗೆ ಆಗಮಿಸಿದ ಸೋದರಿ ಸಹ ಬಂದು ಸುಶಾಂತ್ ನನ್ನು ಕರೆದಿದ್ದಾರೆ. ಆಗಲೂ ಬಾಗಿಲು ತೆರೆಯದಿದ್ದಾಗ ಕೋಣೆಯ ಹೊರಗಿನ ಕಿಟಕಿಯಿಂದ ನೋಡಿದಾಗ ಸುಶಾಂತ್ ದೇಹ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಕೂಡಲೇ ಮನೆಯಲ್ಲಿದ್ದ ಕೆಲಸದ ವ್ಯಕ್ತಿ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸುಶಾಂತ್ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.