– ವಿವಾಹ ವಾರ್ಷಿಕೋತ್ಸವಕ್ಕೆ ಪತಿ ಉಡುಗೊರೆ
ರಾವಲ್ಪಿಂಡಿ(ಇಸ್ಲಾಮಾಬಾದ್): ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರಿಂದ ಪ್ರೇರಿತರಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬ ಚಂದ್ರನಲ್ಲಿ ಭೂಮಿ ಖರೀದಿಸಿ ತನ್ನ ಮಡದಿಗೆ ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ ನೀಡಿದ ಘಟನೆ ನಡೆದಿದೆ.
Advertisement
ರಾವಲ್ಪಿಂಡಿ ನಿವಾಸಿ ಸೋಯೇಬ್ ಅಹ್ಮದ್, ಚಂದ್ರನಲ್ಲಿ ಸೀ ಆಫ್ ವೆಪೌರ್’ ಎಂಬ ಪ್ರದೇಶವನ್ನು ಖರೀದಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಹ್ಮದ್, ಇತ್ತೀಚೆಗೆ ಅಗಲಿರುವ ನಟ ಸುಶಾಂತ್ ಸಿಂಗ್ ಅವರು ಚಂದ್ರನಲ್ಲಿ ಭೂಮಿ ಖರೀದಿಸಿರುವುದು ನನಗೆ ಪ್ರೇರಣೆಯಾಗಿದೆ ಎಂದರು.
Advertisement
Advertisement
ಸುಶಾಂತ್ ಸಿಂಗ್ ಅವರು ಚಂದ್ರನ ಮೇಲಿರುವ ಒಂದು ತುಂಡು ಭೂಮಿಯನ್ನು ಖರೀದಿಸಿದ್ದರು. ಚಂದ್ರನ ಮಾರ್ ಮ್ಯುಸ್ಕೊವೀನ್ಸ್ ಅಥವಾ ಸೀ ಆಫ್ ಸುಸ್ಕೋವಿ ಎಂಬ ಪ್ರಾಂತ್ಯದಲ್ಲಿ ಈ ಜಾಗವನ್ನು ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ರ್ಟಾರ್ ನಿಂದ ಖರೀದಿಸಿದ್ದಲ್ಲದೇ ಅದನ್ನು 2018ರ ಜೂನ್ 25ರಂದು ನೋಂದಾವಣೆ ಮಾಡಿಕೊಂಡಿದ್ದರು.
Advertisement
ಕೇವಲ ಸುಶಾಂತ್ ಸಿಂಗ್ ಮಾತ್ರವಲ್ಲದೇ ಶಾರೂಖ್ ಖಾನ್ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ಚಂದ್ರನ ಮೇಲೆ ಭೂಮಿಯನ್ನು ಹೊಂದಿದ್ದಾರೆ.
ಅಹ್ಮದ್ ಪತ್ನಿ ಈ ಬಗ್ಗೆ ತನ್ನ ಗೆಳೆಯರಲ್ಲಿ ಹೇಳಿಕೊಂಡಾಗ ಮೊದಲು ಅವರು ಆಕೆಯ ಮಾತನ್ನು ನಂಬಲೇ ಇಲ್ಲ. ಅಲ್ಲದೆ ಅವರೆಲ್ಲರೂ ಈಕೆ ಜೋಕ್ ಹೇಳುತ್ತಿದ್ದಾಳೆ ಅಂತ ಅಂದುಕೊಂಡರು. ಆದರೆ ಭೂಮಿ ಖರೀದಿ ಮಾಡಿರುವ ಸಂಬಂಧ ದಾಖಲೆಗಳನ್ನು ತೋರಿಸಿದಾಗ ಅವರು ನಂಬಿದರು ಎಂದು ಹೇಳಿದ್ದಾರೆ. ಸದ್ಯ ಯುಸ್ ಪೋರ್ಟಲ್ ಸರ್ವಿಸ್ ಮೂಲಕ ದಂಪತಿ ಭೂಮಿ ಖರೀದಿಸಿರುವ ಬಗ್ಗೆ ದಾಖಲೆಗಳನ್ನು ಸ್ವೀಕರಿಸಿದ್ದಾರೆ.
ಈ ಹಿಂದೆ ಸುಶಾಂತ್ ಸಿಂಗ್ ನಿಂದ ಪ್ರೇರಿತರಾಗಿ ಬಿಹಾರ ಮೂಲದ ಉದ್ಯಮಿಯೊಬ್ಬರು ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿ ಮಾಡಿದ್ದರು. ಬೋಧ್ ಗಯಾ ನಿವಾಸಿ ನೀರಜ್ ಕುಮಾರ್, ಅಲ್ಲಿ ಭೂಮಿ ಬೆಲೆ ಹೆಚ್ಚೇನೂ ಇಲ್ಲ. ಆದರೆ ಪ್ರಕ್ರಿಯೆ ಕಷ್ಟಕರವಾಗಿದೆ ಎಂದು ಹೇಳಿದ್ದರು.
ಇವರು 2019ರ ಅಕ್ಟೋಬರ್ ತಿಂಗಳಿನಲ್ಲಿ ಇಂಟರ್ ನ್ಯಾಷನಲ್ ಲೂನಾ ಸೊಸೈಟಿಯನ್ನು ಸಂಪರ್ಕಿಸಿ ಒಂದು ಎಕರೆ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು 48,000 ರೂ. ನೀಡಿದ್ದೆ. ಹಣವನ್ನು ಡಾಲರ್ ಗೆ ಪರಿವರ್ತಿಸಿ ನೀಡಲಾಗಿದೆ. ಸಾಕಷ್ಟು ಆನ್ಲೈನ್ ಪತ್ರಗಳ ನಂತರ 2020 ಜುಲೈ 4ರಂದು ನನ್ನ ಪತ್ರ ಪೂರ್ಣಗೊಂಡಿರುವುದಾಗಿ ಸಂದೇಶ ಬಂದಿತ್ತು ಎಂದು ಅವರು ತಿಳಿಸಿದ್ದರು.