– ಝೊಮ್ಯಾಟೋ ಪದಗಳಲ್ಲೇ ಆಟವಾಡಿದೆ ಎಂದ ನೆಟ್ಟಿಗರು
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಾಯಿಯಗ್ತಿರುವ ಕುರಿತು ವಿರುಷ್ಕಾ ದಂಪತಿ ಸುದ್ದಿ ಹಂಚಿಕೊಳ್ಳುತ್ತಿದ್ದಂತೆ ಹೆಚ್ಚು ಚರ್ಚೆ ಆರಂಭವಾಗಿದೆ. ಅದರಲ್ಲೂ ನೆಟ್ಟಿಗರು ಈ ಕುರಿತು ವಿವಿಧ ಬಗೆಯ ಪೋಸ್ಟ್ ಹಾಗೂ ಸಾಲುಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆನ್ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೋ ಸಹ ಈ ಕುರಿತು ವಿಭಿನ್ನವಾಗಿ ಪೋಸ್ಟ್ ಮಾಡುವ ಮೂಲಕ ಗಮನಸೆಳೆದಿದೆ.
Advertisement
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಾವೀಗ ಮೂವರು ಎಂಬ ಸಾಲುಗಳನ್ನು ಬರೆಯುವ ಮೂಲಕ ಈ ಸುದ್ದಿಯನ್ನು ತಿಳಿಸಿದ್ದರು. ಇದಾದ ಬೆನ್ನಲ್ಲೇ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ವಿವಿಧ ರೀತಿಯ ಪೋಸ್ಟ್ಗಳನ್ನು ಹಾಕುವ ಮೂಲಕ ತಮ್ಮ ನೆಚ್ಚಿನ ಕ್ರಿಕೆಟರ್ ಹಾಗೂ ನೆಚ್ಚಿನ ನಟಿಗೆ ಶುಭ ಕೋರುತ್ತಿದ್ದಾರೆ.
Advertisement
And then, we were three! Arriving Jan 2021 ❤️???? pic.twitter.com/0BDSogBM1n
— Virat Kohli (@imVkohli) August 27, 2020
Advertisement
ಅದೇ ರೀತಿ ಇದೀಗ ಝೊಮ್ಯಾಟೋ ಟ್ವೀಟ್ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಶುಭ ಕೋರಿದೆ. ಟ್ವೀಟ್ ಮಾಡಿರುವ ಝೊಮ್ಯಾಟೋ, ಇದು ನಿಜವಾಗಲೂ ಶುಭ ಸುದ್ದಿ. ಸಿಹಿ ತಿನ್ನಲು (ಶರ್ಮಾನಾ) ನಾಚಿಕೊಳ್ಳಬೇಡಿ, ನಿಮಗಾಗಿ ನಮ್ಮ ‘ವಿರಾಟ’ ಸೇವೆ ಲಭ್ಯವಿರುತ್ತೆ ಎಂದು ಬರೆದಿದೆ. ಈ ಟ್ವೀಟ್ ಕುರಿತು ಸಹ ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲವರು ತಮಗಿಷ್ಟದ ಆಹಾರ ಖಾದ್ಯಗಳನ್ನು ಹೆಸರಿಸಿ ಕಮೆಂಟ್ ಮಾಡುತ್ತಿದ್ದಾರೆ.
Advertisement
https://twitter.com/ZomatoIN/status/1298889729874767872
ವಿರುಷ್ಕಾ ದಂಪತಿ ಗುಡ್ ನ್ಯೂಸ್ ನೀಡಿದ ಬಳಿಕ ಇಬ್ಬರ ಹೆಸರು (ಶರ್ಮಾ ಮತ್ತು ವಿರಾಟ) ಬಳಸಿ ಝೊಮ್ಯಾಟೋ ಶುಭಾಶಯ ತಿಳಿಸಿದೆ. ಇನ್ನು ವಿಶ್ ನೋಡಿದ ನೆಟ್ಟಿಗರು ಝೊಮ್ಯಾಟೋ ಪದಗಳಲ್ಲೇ ಆಟವಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ 1,500ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅಲ್ಲದೆ ವಿವಿಧ ಜೋಕ್ಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಮೂರು ವರ್ಷದ ನಂತರ ಅನುಷ್ಕಾ ಅವರು ಗರ್ಭಿಣಿಯಾಗಿದ್ದಾರೆ. ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿರುವ ಕೊಹ್ಲಿ ಹಾಗೂ ಅನುಷ್ಕಾ, ನಾವು ಈಗ ಮೂವರು, ಜನವರಿಯಲ್ಲಿ ಡೆಲಿವರಿ ಎಂದು ಬರೆದುಕೊಂಡಿದ್ದಾರೆ.
2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್ ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ರು.