ಚಿತ್ರದುರ್ಗ: ಮಾಜಿ ಸಿಎಂ ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಜನರಿಗೆ ವಂಚನೆ ಮಾಡಿದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಬ್ಲಿಕ್ ಡಿಬೇಟ್ ಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಹ್ವಾನಿಸಿದ್ದಾರೆ.
ದಾವಣಗೆರೆಗೆ ತೆರಳುವ ಮಾರ್ಗ ಮಧ್ಯೆ ಉಪಹಾರ ಮಾಡಲು ಚಿತ್ರದುರ್ಗದ ಖಾಸಗಿ ಹೋಟೆಲ್ ಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನುಡಿದಂತೆ ನಡೆದಿದ್ದಾರೆ. ಕೊಟ್ಟ ಮಾತು ತಪ್ಪಿಲ್ಲ. ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿದ ಅವರು, ವಿಧಾನಸೌಧ ಪ್ರವೇಶ ಮಾಡಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ಈ ಬಗ್ಗೆ ನಳಿನ್ ಕಟೀಲ್ ಬೇಕಿದ್ದರೆ ನೇರ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್ಗೆ ದರ್ಶನ್ ತಿರುಗೇಟು
Advertisement
Advertisement
ದಿನೇ ದಿನೇ ಹೆಚ್ಚಾಗುತ್ತಿರುವ ಇಂಧನ ದರ ಏರಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಬಂಡು ಸರ್ಕಾರ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಅಲ್ಲದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಈಗಾಗಲೇ ಕಾಂಗ್ರೆಸ್ ಧರಣಿ ನಡೆಸಿ ಪ್ರತಿಭಟಿಸಿದರೂ ಕೇಂದ್ರ ಬಿಜೆಪಿ ಸರ್ಕಾರ ತನ್ನ ಧೋರಣೆ ನೀತಿಯನ್ನೇ ಅನುಸರಿಸಿದೆ ಎಂದು ಆರೋಪಿಸಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಣ್ಣ ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ: ಸಂದೇಶ್ ನಾಗರಾಜ್ ಪುತ್ರ
Advertisement
Advertisement
ಬಿಜೆಪಿಯಲ್ಲಿ ನಡೆಯುತ್ತಿರೋದು ಯಾವ ಆಟ. ರಾಜ್ಯ ಕಾಂಗ್ರೆಸ್ ನಲ್ಲಿ ಮ್ಯಾಜಿಕ್ ಚೇರ್ ಆಟ ಎಂದ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಕಾಂಗ್ರೆಸ್ ನಲ್ಲಿ ಮ್ಯಾಜಿಕ್ ಚೇರ್ ಆಟ ನಡೆಯುತ್ತಿದೆಯೋ ಅಥವಾ ಬೇರೆ ಯಾವುದೋ? ಆದಕ್ಕೂ ಮೊದಲು ಬಿಜೆಪಿಯಲ್ಲಿ ನಡೆಯುತ್ತಿದೆಯಲ್ಲ ಅದು ಯಾವ ಚೇರ್ ಆಟ? ಎಂಬುದನ್ನು ಕಟೀಲ್ ತಿಳಿಸಬೇಕು ಎಂದು ಲೇವಡಿ ಮಾಡಿದರು.
ಈ ವೇಳೆ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಧ್ರುವನಾರಾಯಣ್, ಶಾಸಕ ಟಿ.ರಘು ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ ತಾಜ್ ಪೀರ್, ಹನುಮಲಿ ಷಣ್ಮುಖಪ್ಪ, ಜಿ.ಎಸ್.ಮಂಜುನಾಥ್ ಸೇರಿದಂತೆ ಇತರರು ಇದ್ದರು.