ಬೆಂಗಳೂರು: ಸಿಡಿ ಗ್ಯಾಂಗ್ನ ಇನ್ನಷ್ಟು ಸ್ಫೋಟಕ ಸುದ್ದಿ ಹೊರಬೀಳುತ್ತಿದೆ. ಖತರ್ನಾಕ್ ಹಿಸ್ಟರಿಯೇ ಈ ಸಿಡಿ ಸೂತ್ರದಾರರ ಹಿಂದಿದೆ. ಈ ಗ್ಯಾಂಗ್ ಮಾಡಿರೋದು ಇದೊಂದೆ ಸಿಡಿಯಲ್ಲ. ಜಾರಕಿಹೊಳಿ ಮಾತ್ರವಲ್ಲದೆ ಮತ್ತಷ್ಟು ಮಂದಿಗೆ ಈ ಗ್ಯಾಂಗ್ ಹಣಕ್ಕಾಗಿ ಪೀಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ಕರ್ನಾಟಕದ ಮಾಜಿ ಸಚಿವರ ಬಳಿಯೂ ಈ ಗ್ಯಾಂಗ್ ಡೀಲ್ ಮಾಡಿತ್ತಂತೆ. ಈ ಮೂಲಕ ಕಾಂಗ್ರೆಸ್ಸಿನ ಇಬ್ಬರು ಜನಪ್ರತಿನಿಧಿಗಳಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎನ್ನಲಾಗಿದೆ. ಚಿತ್ರದುರ್ಗ ಮೂಲದ ಮಾಜಿ ಸಚಿವರಿಗೆ ಸಿಡಿ ಯುವತಿ ಮಾ.1ರಂದು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಳಂತೆ. ಆಗ ಮಾಜಿ ಸಚಿವರು 60,000 ಪೈಕಿ 50,000 ಕೊಟ್ಟಿದ್ದರು ಎನ್ನಲಾಗಿದೆ.
Advertisement
ಚಿತ್ರದುರ್ಗದ ಮಾಜಿ ಮಂತ್ರಿಯಲ್ಲದೆ ಹಾವೇರಿ ಮೂಲದ ಮಾಜಿ ಶಾಸಕನೂ ಹನಿಟ್ರ್ಯಾಪ್ ಮಾಡಲಾಗಿದೆಯಂತೆ. ಮಾಜಿ ಶಾಸಕರು ಮಾನ ಮಾರ್ಯಾದೆಗೆ ಅಂಜಿ 75 ಲಕ್ಷ ಕೊಟ್ಟಿದ್ದಾರೆ. ಈ ಸ್ಫೋಟಕ ಸತ್ಯ ಎಸ್ಐಟಿ ತನಿಖೆ ವೇಳೆ ಹೊರಬಿದ್ದಿದೆ. ಒಟ್ಟಿನಲ್ಲಿ ಸಿಡಿಕೋರರ ಡೀಲ್ ಕಂಡು ಎಸ್ಐಟಿ ಅಧಿಕಾರಿಗಳೇ ದಂಗಾಗಿದ್ದಾರೆ.