ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ಬಂದ ಹಿನ್ನೆಲೆಯಲ್ಲಿ 8 ಮಂದಿ ಸೆಲ್ಫ್ ಕಾರಂಟೈನ್ ಆಗಿದ್ದಾರೆ.
ಇದುವರೆಗೆ 5 ಜನ ಸಚಿವರು, ಒಬ್ಬರು ಮಾಜಿ ಶಾಸಕ, ನಗರ ಪೊಲೀಸ್ ಆಯುಕ್ತ ಮತ್ತು ಪುತ್ರ ವಿಜಯೇಂದ್ರ ಕ್ವಾರಂಟೈನ್ ಆಗಿದ್ದಾರೆ.
Advertisement
Advertisement
ಯಾರೆಲ್ಲ ಕ್ವಾರಂಟೈನ್?
ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಸಚಿವ ಆರ್ ಅಶೋಕ್, ಮುಜರಾಯಿ ಖಾತೆಯ ಸಚಿವ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಕೆಸಿ. ಕಮಲ್ ಪಂತ್, ಮಾಜಿ ಶಾಸಕ ಜೀವರಾಜ್, ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ.