ಹೈದರಾಬಾದ್: ಸಾಲ ಕೋಡುತ್ತೇವೆ ಎಂದು ಹೇಳಿ, ಆನ್ಲೈನ್ ಆ್ಯಪ್ ಮೂಲಕವಾಗಿ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್ನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
Advertisement
ಚೀನೀ ಮಹಿಳೆ ಸಹಿತ ಮೂವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಪುಣೆ ಮೂಲದ ಕಾಲ್ ಸೆಂಟರ್ ಮೂಲಕವಾಗಿ ಸಾಲಪಡೆದವರನ್ನು ಈ ಗ್ಯಾಂಗ್ ಬೆದರಿಸಿ ಹಣ ವಸೂಲಿ ಮಾಡುತ್ತಿತ್ತು. ಅಧಿಕ ಬಡ್ಡಿದರ ವಸೂಲಾತಿಗಾಗಿ ಬೆದರಿಕೆ ಹಾಕಿದ ಹಿನ್ನೆಲೆ ಹೈದರಾಬಾದ್ನ ವ್ಯಕ್ತಿಯೊಬ್ಬ ದೂರನ್ನು ನೀಡಿದ್ದನು. ಈ ದೂರನ್ನು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Advertisement
Advertisement
ಕಳೆದ ಒಂದು ತಿಂಗಳಲ್ಲಿ ತೆಲಂಗಾಣದಲ್ಲಿ ಇಂತಹ ಕಂಪನಿಗಳ ಕಿರುಕುಳದಿಂದಾಗಿ ಮನನೊಂದು ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಮೂರು ಆತ್ಮಹತ್ಯೆ ಪ್ರಕರಣಗಳಾಗಿದ್ದವು. ನಂತರ ತ್ವರಿತ ಹಣ ಸಾಲ ನೀಡುವ ಅಪ್ಲಿಕೇಶನ್ಗಳ ಕುರಿತಾಗಿ ಎಚ್ಚೆತ್ತುಕೊಂಡ ಪೊಲೀಸರು ಈ ಜಾಲವನ್ನು ಭೇಧಿಸಲು ಆರಂಭಿಸಿದ್ದಾರೆ. ಈ ಹಿಂದೆ ಇದೇ ರೀತಿಯಾಗಿ ವಂಚನೆಯ ಜಾಲದಲ್ಲಿ ಶಾಮೀಲಾಗಿದ್ದ ಚೀನೀ ಪ್ರಜೆಯೊಬ್ಬನ ಸಹಿತ ನಾಲ್ವರನ್ನು ಬಂಧಿಸಲಾಗಿತ್ತು.
Advertisement