ಮುಂಬೈ: ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕಳೆದ ವರ್ಷ ಪ್ರಕಾಶ್ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು.
ಒಂದು ವಾರದ ಹಿಂದೆ ಪ್ರಕಾಶ್ ಅವರ ಪತ್ನಿ ನೈನಾ ಶಾ ಸಹ ಜೈನ ಮುನಿಗಳಿಂದ ದೀಕ್ಷೆ ಪಡೆದಿದ್ದರು. ಒಂದು ದಶಕಕ್ಕೂ ಅಧಿಕ ಕಾಲ ರಿಲಯನ್ಸ್ ಇಂಡಸ್ಟ್ರಿಯ ಮಹತ್ವದ ಹುದ್ದೆಗಳನ್ನ ಒಪ್ರಕಾಶ್ ಶಾ ನಿರ್ವಹಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದ ಶಾ ಒಳ್ಳೆಯ ಸಂಬಳವನ್ನ ಪಡೆಯುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಓರ್ವ ಸನ್ಯಾಸಿಯಾಗಿ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
Advertisement
Advertisement
ಫೋಟೋ ವೈರಲ್: ಸದಾ ಸೂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಕಾಶ್ ಶಾ, ಜೈನ ಸನ್ಯಾಸಿಯಾಗಿದ್ದು, ಶ್ವೇತ ವಸ್ತ್ರ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement
Advertisement
40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು. ರಿಲಯನ್ಸ್ ಕಂಪನಿಯ ಜಾಮ್ನಗರ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜಕ್ಟ್ ನಲ್ಲಿ ಆರಂಭಿಸುವಲ್ಲಿ ಶಾ ಅವರು ಮಹತ್ವದ ಪಾತ್ರವಿದೆ. ಅವರ ಪತ್ನಿ ನೈನಾ ವಾಣಿಜ್ಯ ಪದವಿ ಓದಿದ್ದಾರೆ.
ಕಳೆದ ವರ್ಷವೇ ಶಾ ವರು ದೀಕ್ಷೆಗೆ ಮುಂದಾಗಿದ್ದರು. ಆದ್ರೆ ಕೊರೊನಾದಿಂದ ದೀಕ್ಷೆ ಪಡೆಯುವುದು ಮುಂದೂಡಿಕೆಯಾಗುತ್ತಾ ಬಂದಿತ್ತು. ಏಳು ವರ್ಷಗಳ ಹಿಂದೆ ಶಾ ಪುತ್ರ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರು ಸಹ ಬಾಂಬೆ ಐಐಟಿಯಲ್ಲಿ ಪದವಿ ಪಡೆದಿದ್ದರು. ಮತ್ತೋರ್ವ ಮಗ ಗೃಹಸ್ಥ ಜೀವನ ನಡೆಸುತ್ತಿದ್ದು, ಒಬ್ಬ ಮಗನಿದ್ದಾನೆ.