ಮುಂಬೈ: ಷರತ್ತೊಂದನ್ನು ಹಾಕಿ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಖುದ್ದು ತಾವೇ ನಟಿಸಲು ಸಿದ್ದವೆಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಜೊತೆಗೆ ಇನ್ಸ್ಟಾಗ್ರಾಮ್ ವಿರಾಟ್ ಲೈವ್ ಚಾಟ್ ಮಾಡಿದ್ದರು. ಈ ವೇಳೆ ತಮ್ಮ ಬಯೋಪಿಕ್ನಲ್ಲಿ ತಾವೇ ನಟಿಸಲು ಸಿದ್ಧವೆಂದು ಷರತ್ತೊಂದನ್ನು ಹಾಕಿದ್ದಾರೆ. ತಮ್ಮ ಬಯೋಪಿಕ್ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ನಟಿಸಬೇಕು ಎಂದು ಕೊಹ್ಲಿ ಕಂಡೀಶನ್ ಹಾಕಿದ್ದಾರೆ.
Advertisement
Advertisement
ಅನುಷ್ಕಾ ಜೊತೆಗೆ ಇದ್ದರೆ ಖಂಡಿತವಾಗಿ ನನ್ನ ಜೀವನಾಧಾರಿತ ಸಿನಿಮಾದಲ್ಲಿ ನಾನೇ ನಟಿಸುತ್ತೇನೆ. ನನ್ನ ವ್ಯಕ್ತಿತ್ವವನ್ನು ರೂಪಿಸಲು ಅನುಷ್ಕಾ ಬಹಳ ನೆರವಾಗಿದ್ದಾರೆ. ನಾನು ಮೊದಲು ಹೀಗೆ ಇರಲಿಲ್ಲ. ಜೀವನದಲ್ಲಿ ಪ್ರತಿಯೊಬ್ಬರು ಕೂಡ ನಮಗೆ ಸರಿ ಹೊಂದುವ ರೀತಿಯಲ್ಲಿ ಇರುತ್ತಾರೆ. ಆದರೆ ಒಬ್ಬ ವ್ಯಕ್ತಿ ನಿಮ್ಮೊಳಗಿನ ಶ್ರೇಷ್ಠತೆಯನ್ನು ಹೊರತರುವ ಪ್ರಯತ್ನ ಮಾಡುತ್ತಾರೆ. ಅನುಷ್ಕಾ ಸಿಕ್ಕ ಮೇಲೆ ಪ್ರತಿಯೊಂದು ವಿಚಾರವೂ ನನ್ನೊಬ್ಬನ ಬಗ್ಗೆ ಮಾತ್ರವಲ್ಲ ಎಂಬುದು ನನಗೆ ತಿಳಿಯಿತು. ಜೀವನದಲ್ಲಿ ಬೇರೆಯವರ ಬಗ್ಗೆ ಕೂಡ ಕಾಳಜಿವಹಿಸಿ ಬದುಕಬೇಕಾಗುತ್ತದೆ ಎಂದು ಲೈವ್ ಚಾಟ್ನಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.
Advertisement
Advertisement
ನಾವು ಏನೆಂದು ನಮಗೆ ನಿಜವಾಗಿಯೂ ಅರ್ಥವಾದ ಬಳಿಕ ಆತ್ಮವಿಶ್ವಾಸ ಹೆಚ್ಚಾಗುತ್ತೆ. ನಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಅನ್ನೋದನ್ನ ನನಗೆ ತಿಳಿಯುವಂತೆ ಮಾಡಿದ್ದು ಅನುಷ್ಕಾ. ನಾನು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಅನುಷ್ಕಾ ನೆರವಾದರು. ಈಗ ಯಾರಾದರು ನನ್ನ ಬಳಿ ಸಹಾಯ ಕೇಳಿದರೆ, ಅದು ನನ್ನಿಂದ ಮಾಡಲು ಆದರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಪತ್ನಿ ಬಗ್ಗೆ ಮನಬಿಚ್ಚಿ ಕೊಹ್ಲಿ ಮಾತನಾಡಿದ್ದಾರೆ.
ಈ ಹಿಂದೆ ಅನುಷ್ಕಾ ಶೇರ್ ಮಾಡಿದ್ದ ಸ್ಪೆಷಲ್ ಫೋಟೋವೊಂದು ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಲಾಕ್ಡೌನ್ನಲ್ಲಿ ಸದ್ಯ ‘ಪಾತಾಳ್ ಲೋಕ್’ ವೆಬ್ ಸಿರೀಸ್ ಮೂಲಕ ಅಭಿಮಾನಿಗಳನ್ನು ಅನುಷ್ಕಾ ರಂಜಿಸುತ್ತಿದ್ದಾರೆ. ವೆಬ್ ಸಿರೀಸ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಅನುಷ್ಕಾರ ಅಭಿನಯ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ ಮನೆಯಲ್ಲಿ ‘ಪಾತಾಳ್ ಲೋಕ್’ನ ಮೊದಲ ಭಾಗ ವೀಕ್ಷಿಸುತ್ತಿರುವ ಫೋಟೋವನ್ನು ಅನುಷ್ಕಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋದಲ್ಲಿ ಕಂಡುಬಂದಿದ್ದ ಅನುಷ್ಕಾ ಮತ್ತು ವಿರಾಟ್ ಮದುವೆಯ ವ್ಯಂಗ್ಯ ಚಿತ್ರದ ಫೋಟೋ ಎಲ್ಲರ ಗಮನ ಸೆಳೆದಿತ್ತು. ವಧು-ವರರ ಗೆಟಪ್ನಲ್ಲಿ ಇದ್ದ ವಿರಾಟ್ ಮತ್ತು ಅನುಷ್ಕಾರ ವ್ಯಂಗ್ಯ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.