ದಾವಣಗೆರೆ: ಮಾಜಿ ಸಚಿವ, ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಸೋದರ ಶಿವಾಜಿ ನಾಯ್ಕ್ ವೃದ್ಧನೋರ್ವನ ಮೇಲೆ ಹಲ್ಲೆಗೆ ಯತ್ನಿಸಿರುವ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ.
Advertisement
ಶರಣ್ ನಾಯ್ಕ್ ಹಲ್ಲೆಗೊಳಗಾದ ವೃದ್ಧ. ಶಿವಾಜಿ ನಾಯ್ಕ್ ಮನೆಯ ಪಕ್ಕದಲ್ಲಿಯೇ ಶರಣ್ ನಾಯ್ಕ್ ವಾಸವಾಗಿದ್ದಾರೆ. ಶರಣ್ ನಾಯ್ಕ್ ಮತ್ತು ಶಿವಾಜಿ ನಾಯ್ಕ್ ಮಧ್ಯೆ ಮನೆಯ ಜಾಗದ ವಿಚಾರವಾಗಿ ವಿವಾದ ಇತ್ತು. ಈ ಹಿಂದೆಯೂ ಹಲವು ಬಾರಿ ಎರಡೂ ಕುಟುಂಬಗಳ ಗಲಾಟೆ ನಡೆದಿದೆ.
Advertisement
Advertisement
ಇದೇ ವಿಚಾರಕ್ಕೆ ಇಂದು ಬೆಳಗ್ಗೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಶಿವಾಜಿ ನಾಯ್ಕ್ ಕಬ್ಬಿಣದ ಹಾರೆಯಿಂದ ಹಲ್ಲೆಗೆ ಯತ್ನ ನಡೆಸಿದ್ದು, ತಳ್ಳಾಟ ನೂಕಾಟ ನಡೆದಿದೆ. ಸದ್ಯ ವೃದ್ಧನನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ವೃದ್ಧನ ಕುಟುಂಬಸ್ಥರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ನೆಟ್ವರ್ಕ್ ಸಮಸ್ಯೆ – ಆನ್ಲೈನ್ ಶಿಕ್ಷಣ ಪಡೆಯಲಾಗದೇ ವಿದ್ಯಾರ್ಥಿಗಳ ಪರದಾಟ