ಬೆಂಗಳೂರು: ಶಾಲೆ ರೀ ಓಪನ್ಗೆ ತಜ್ಞರ ಗ್ರೀನ್ ಸಿಗ್ನಲ್ ನೀಡಿದ್ದು, ಕೆಲವು ನಿಯಮಗಳನ್ನು ಪಾಲಿಸುವಂತೆ ಸಲಹಾ ಸಮಿತಿ ಸದಸ್ಯ ಮತ್ತು ಹಿರಿಯ ತಜ್ಞ ವೈದ್ಯರಾದ ಡಾ. ಗಿರಿಧರ್ ಬಾಬು ಸೂಚನೆ ನೀಡಿದ್ದಾರೆ.
Advertisement
ಕೊರೊನಾ ಮಹಾಮಾರಿಯಿಂದ ಶಾಲೆಗಳು ಓಪನ್ ಆಗಿ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಾಯ್ತು. ಈಗ ಪಾಸಿಟಿವಿಟಿ ರೇಟ್ ಕಡಿಮೆ ಆಗಿದ್ದು, ಆಗಸ್ಟ್ನಲ್ಲಿ ಶಾಲೆಗಳು ರೀ ಓಪನ್ ಮಾಡುವ ಪ್ಲ್ಯಾನ್ನಲ್ಲಿ ಸರ್ಕಾರ ಇದೆ. ಶಾಲೆ ಓಪನ್ ಮಾಡಿದ್ರೆ ಒಳ್ಳೆಯದು. ಶಾಲೆ ಓಪನ್ ಮಾಡದಿದ್ದರೆ ತುಂಬಾ ದುಷ್ಪರಿಣಾಮ ಎದುರಿಸಬೇಕಾಗುತ್ತೆ ಅಂತಾ ತಙ್ಞರು ಎಚ್ಚರಿಸುತ್ತಾ ಇದ್ದಾರೆ. ಶಾಲೆ ರೀ ಓಪನ್ ಮಾಡಿದರೆ ಕಡ್ಡಾಯವಾಗಿ ಈ ನಿಯಮಗಳನ್ನ ಪಾಲನೆ ಮಾಡಲೇ ಬೇಕು ಎಂದು ತಜ್ಞ ವೈದ್ಯರಾದ ಡಾ. ಗಿರಿಧರ್ ಬಾಬು ಕೆಲವು ಸಲಹೆಗಳನ್ನ ಕೊಡ್ತಾ ಇದ್ದಾರೆ.
Advertisement
Mitigation measures needed in schools:
5. Expanding screening testing to rapidly identify & isolate asymptomatic infected individuals.
6. Staff & students should continue to have options for online education.
7. Mandatory vaccination of staff & teachers.https://t.co/mfcBSq01qx
— Dr Giridhara R Babu (@epigiri) July 31, 2021
Advertisement
ಸ್ಕೂಲ್ ಓಪನ್ ಆದರೆ ನಿಯಮಗಳು ಹೇಗಿರಬೇಕು?
1. ಯೂನಿವರ್ಸಲ್ ಫೇಸ್ ಮಾಸ್ಕ್ ಬಳಸಬೇಕು.
2. ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಬೇಕು.
3. ಶಾಲೆಯ ಆವರಣದಲ್ಲಿ ಮತ್ತು ಕೊಠಡಿಗಳಲ್ಲಿ ಗುಂಪನ್ನು ಕಡಿಮೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಬೇಕು.
4. ಜನಸಂದಣಿಯನ್ನು ತಡೆಯಲು ಹೈಬ್ರಿಡ್ ಹಾಜರಾತಿ ಮಾದರಿಗಳನ್ನು ಬಳಸುವುದು.
Advertisement
Mitigation measures need in schools:
1. Universal face mask use
2, Increasing physical distance by decreasing crowded classrooms and common areas
3. Using hybrid attendance models to prevent crowding, 4. increasing room air ventilation
— Dr Giridhara R Babu (@epigiri) July 31, 2021
5. ತರಗತಿ ಕೋಣೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು.
6. ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಪ್ರತ್ಯೇಕಿಸಲು ಸ್ಕ್ರೀನಿಂಗ್ ಪರೀಕ್ಷೆಯನ್ನು ವಿಸ್ತರಿಸುವುದು.
7. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣಕ್ಕಾಗಿ ಆಯ್ಕೆಗಳನ್ನು ಮುಂದುವರಿಸಬೇಕು.
8. ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಸಲಿಕೆ ಪಡೆದಿರಬೇಕು.