ಬೆಂಗಳೂರು: ಶಾಲೆ ತೆರೆಯಲು ಅವಸರ ಬೇಡ. ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆ ಆರಂಭ ವಿಚಾರವಾಗಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿಲ್ಲ, ಮಾತನಾಡ್ತೀನಿ. ಮಕ್ಕಳ ಜೀವ ಮುಖ್ಯವಾಗಿದೆ. 24,37,732 ಜನ ಉನ್ನತ ಶಿಕ್ಷಣ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ಇದ್ದಾರೆ. ಇಂದಿನಿಂದ ಲಸಿಕೆ ನೀಡುತ್ತಿದ್ದೇವೆ. ಹತ್ತು ವರ್ಷದೊಳಗಿರೋ ಮಕ್ಕಳಿಗೂ ನೀಡಲು ಚಿಂತನೆ ಇದೆ ಎಂದಿದ್ದಾರೆ.
Advertisement
Advertisement
ಶಾಲೆ ಆರಂಭಕ್ಕೆ ಬಹಳ ಎಚ್ಚರಿಕೆ ವಹಿಸಬೇಕು. ಏಮ್ಸ್ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಿ ಅಂತ ಹೇಳಿದ್ದಾರೆ. ಶಾಲೆ ತೆರೆಯಲು ಅವಸರ ಬೇಡ ಅಂತ ಸೂಚಿಸಿದ್ದಾರೆ. ಅನ್ ಲಾಕ್ ಮಾಡಿರೋ ಅವಧಿ ಜುಲೈ 5 ರ ವರೆಗೂ ಇದೆ. ಇದೆಲ್ಲವನ್ನೂ ಗಮನಿಸಬೇಕು. ಲಸಿಕೆ ಪ್ರಮಾಣ ಕಡಿಮೆ ಇದೆ. ಇನ್ನೆರಡು ದಿನದಲ್ಲಿ ದೆಹಲಿಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಮಾತನಾಡುತ್ತೇನೆ. ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸುತ್ತೇವೆ. ಇದನ್ನೂ ಓದಿ : ಮಾಸ್ಕ್ ಬದಲಿಸಿಕೊಂಡು ಮದುವೆಯಾದ ಜೋಡಿ
Advertisement
Advertisement
ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚು ಸೋಂಕಿದೆ. ಮದುವೆಗೆ ಚೌಲ್ಟ್ರಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜನರ ಮನವಿಗೆ ಸ್ಪಂದಿಸಿ ಸಿಎಂ ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವೆಡೆ ನಿಯಮ ಮೀರಿ ಜನ ಸೇರ್ತಿದ್ದಾರೆ. ಅಂತ ಕಡೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರೇ ಹೊಣೆಯಾಗಲಿದ್ದಾರೆ. ಇವರು ತಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಡಿಸಿ, ಎಸ್ಪಿಗಳು ತಮ್ಮ ಕೆಲಸ ಮಾಡಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಎಲ್ಲಿ 40 ಜನ ಮೀರಿ ಹೋಟೆಲ್, ರೆಸ್ಟೋರೆಂಟ್ ನಲ್ಲಿ ಜನ ಸೇರಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ದುಪ್ಪಟ್ಟು ಪೆನಾಲ್ಟಿ ಹಾಕಲು ಸೂಚಿಸುತ್ತೇನೆ ಎಂದು ಖಡಖ್ ಎಚ್ಚರಿಕೆ ಕೊಟ್ಟಿದ್ದಾರೆ.
ಬ್ಲಾಕ್ ಫಂಗಸ್ ವಾಸಿಯಾಗಲು ಸಮಯ ಬೇಕು. ಕನಿಷ್ಠ ಮೂರು ತಿಂಗಳು ಅವಧಿ ಬೇಕಾಗಲಿದೆ. ಲಸಿಕೆ ಕೊರತೆ ಅನ್ನೋದು ಇಲ್ಲ. ಆದರೆ ಹಂತ ಹಂತವಾಗಿ ನೀಡುತ್ತಾ ಬರುತ್ತೇವೆ ಎಂದಿದ್ದಾರೆ.