ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ದೇವರಗುಡ್ಡದ ಮಾಲತೇಶ ದೇವರ ಐತಿಹಾಸಿಕ ಕಾರ್ಣಿಕೋತ್ಸವ ಜರುಗಿತು. ಹನ್ನೊಂದು ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿದ ನಾಗಪ್ಪಜ್ಜ ಗೊರವಯ್ಯ ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್ ಎಂದು ದೈವವಾಣಿಯನ್ನ ಗೊರವಯ್ಯ ನುಡಿದ್ದಾರೆ.
ವರ್ಷದ ಭವಿಷ್ಯವಾಣಿ ಎಂತಲೆ ನಂಬಲಾಗಿರೋ ಕಾರ್ಣಿಕ ಗ್ರಾಮ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು. ಪ್ರತಿವರ್ಷ ವಿಜಯ ದಶಮಿ ಹಬ್ಬದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕ ಈ ವರ್ಷ ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್ ದೈವವಾಣಿ ನುಡಿಯಲಾಯಿತು.
Advertisement
Advertisement
ಕೊರೊನಾ ಎಂಬ ರೋಗ ದೂರವಾಗಿ ಸೃಷ್ಟಿಯಲ್ಲಿ ಸಿರಿ ಆಗಲಿದೆ. ಮುಂಗಾರು ಬೆಳೆ ಹಾನಿಯಾಗಿವೆ. ಹಿಂಗಾರು ಬೆಳೆ ಉತ್ತಮವಾಗಿ ಬರಲಿವೆ. ರಾಜಕೀಯವಾಗಿ ಡೋಲಾಯಮಾನ ಸ್ಥಿತಿ ಸುಧಾರಣೆ ಆಗಲಿದೆ. ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಲಿದೆ ಎಂದು ಕಾರ್ಣಿಕವನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗುರೂಜಿ ವಿಶ್ಲೇಷಿಸಿದ್ದಾರೆ.