ಸೌಥಾಂಪ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ದಾಖಲೆ ಬರೆದಿದ್ದಾರೆ. ಐಸಿಸಿಯ ಎಲ್ಲ ಟೂರ್ನಿಗಳ ಫೈನಲ್ನಲ್ಲಿ ಆಡಿದ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.
Advertisement
2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2014ರ ಟಿ 20 ವಿಶ್ವಕಪ್ನಲ್ಲಿ ಆಡಿದ ಕೊಹ್ಲಿ ಈಗ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
Advertisement
Advertisement
ಮಂದ ಬೆಳಕಿಗೆ ಬಲಿ:
ಮೊದಲ ದಿನ ಮಳೆಗೆ ಬಲಿಯಾದರೆ ಎರಡನೇ ದಿನದ ಪಂದ್ಯವೂ ಮಂದ ಬೆಳಕು ಮತ್ತು ಮಳೆಗೆ ಬಲಿಯಾಯಿತು. ದಿನದಾಟದಲ್ಲಿ 64.4 ಓವರ್ ಗಳಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 146 ರನ್ ಪೇರಿಸಿದೆ. ಇದನ್ನೂ ಓದಿ : 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?
Advertisement
ಮೊದಲ ವಿಕೆಟ್ಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 62 ರನ್ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ 34 ರನ್(68 ಎಸೆತ, 6 ಬೌಂಡರಿ) ಶುಭಮನ್ ಗಿಲ್ 28 ರನ್(64 ಎಸೆತ, 3 ಬೌಂಡರಿ) ಹೊಡೆದು ಔಟದರು. ತಂಡದ ಮೊತ್ತ 63 ರನ್ ಗಳಿಸುವಷ್ಟರಲ್ಲಿ ಇಬ್ಬರು ಪೆವಿಲಿಯನ್ ಸೇರಿದ್ದರು.
54 ಎಸೆತ ಎದುರಿಸಿ 2 ಬೌಂಡರಿ ಹೊಡೆದು 8 ರನ್ ಗಳಿಸಿ ಚೇತೇಶ್ವರ ಪೂಜಾರಾ ಬೌಲ್ಟ್ ಎಸೆತಕ್ಕೆ ಬೌಲ್ಡ್ ಆದರು. ಮುರಿಯದ ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ 147 ಎಸೆತಗಳಲ್ಲಿ 58 ರನ್ ಗಳಿಸಿದ್ದು ಇಂದು ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್, ಕೈಲ್ ಜೇಮಿಸನ್, ನೆಲಿ ವ್ಯಾಗ್ನರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.