ಬೆಂಗಳೂರು: ಲಾಕ್ಡೌನ್ನಿಂದ ಹೈದರಾಬಾದ್ನಲ್ಲಿ ಸಿಲುಕಿದ್ದ 7 ವರ್ಷದ ಬಾಲಕಿಯೊಬ್ಬಳು ಒಬ್ಬಳೇ ವಿಮಾನದಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಬಂದು ಪೋಷಕರ ಮಡಿಲು ಸೇರಿದ್ದಾಳೆ.
ಲಾಕ್ಡೌನ್ನಿಂದ ನಿಂತು ಹೋಗಿದ್ದ ವಿಮಾನಯಾನ ಈಗ ಮತ್ತೆ ಆರಂಭವಾಗಿದ್ದು, ದೇಶೀಯ ವಿಮಾನಗಳು ಹಾರಾಟ ಆರಂಭಿಸಿವೆ. ಹೀಗಾಗಿ ಹೈದರಾಬಾದಿನಿಂದ ಬಬ್ಬಳೇ ಪ್ರಯಾಣ ಬೆಳಸಿದ ಜೈನಾ ಜೈನ್ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ತನ್ನ ಪೋಷಕರನ್ನು ಸೇರಿದ್ದಾಳೆ. ಮಗಳು ಬರವುದನ್ನೇ ಕಾಯುತ್ತಾ ವಿಮಾನ ನಿಲ್ದಾಣದಲ್ಲಿ ಕುಳಿತ್ತಿದ್ದ ಅಪ್ಪ-ಅಮ್ಮ ಮಗಳನ್ನು ಕಂಡು ಖುಷಿಯಾಗಿ ಅಪ್ಪಿ ಮುದ್ದಾಡಿದ್ದಾರೆ.
Advertisement
Advertisement
ಲಾಕ್ಡೌನ್ ಆಗುವುದಕ್ಕೂ ಮುನ್ನವೇ ಜೈನಾ ಹೈದರಾಬಾದಿನಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದಳು. ಆದರೆ ತಕ್ಷಣ ಲಾಕ್ಡೌನ್ ಆದ ಕಾರಣ ವಾಪಸ್ ಬರಲು ಆಗಿರಲಿಲ್ಲ. ಹೀಗಾಗಿ ಸುಮಾರು ಮೂರು ತಿಂಗಳು ಪೋಷಕರಿಂದ ದೂರವಿದ್ದಳು. ಈಗ ಲಾಕ್ಡೌನ್ ಸಡಿಲಿಕೆ ಆದ ಹಿನ್ನೆಲೆಯಲ್ಲಿ ಇಂದು ಬಂದ ವಿಮಾನದಲ್ಲಿ ಜೈನಾ ಬಂದಿದ್ದಾಳೆ. ಮಗುವನ್ನು ಸುರಕ್ಷಿತವಾಗಿ ಕರೆತಂದ ಏರ್ ಪೋರ್ಟ್ ಸಿಬ್ಬಂದಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಗಳನ್ನು ಜೋಪಾನವಾಗಿ ಕರೆತಂದ ಏರ್ ಪೋರ್ಟ್ ಸಿಬ್ಬಂದಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ದಂಪತಿ ಧನ್ಯವಾದ ಹೇಳಿದ್ದಾರೆ.
Advertisement
60 ವರ್ಷ ಹಿರಿಯ ವ್ಯಕ್ತಿಗಳಿಗೆ ವಿಮಾನ ಪ್ರಯಾಣ ನಿಷೇಧಿಸಲಾಗಿದೆ. ಹೀಗಾಗಿ ಜೈನಾ ಜೈನ್ ಒಬ್ಬಳೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.