ಬೆಂಗಳೂರು: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಡೀಸ್ರವರು ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಸಿನಿಮಾದಲ್ಲಿ ಬರುವ 5 ನಿಮಿಷದ ಹಾಡಿಗೆ ಜಾಕ್ವೆಲಿನ್ ಫರ್ನಾಡೀಸ್ ಪಡೆದಿರುವ ಸಂಭಾವನೆ ಕೇಳಿದರೆ ಎಲ್ಲರೂ ಖಂಡಿತ ಅಚ್ಚರಿ ಪಡುತ್ತಾರೆ.
Advertisement
ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ. ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತ್ರಿಡಿ ಟೆಕ್ನಾಲಜಿಯಲ್ಲಿ ತೆರೆ ಮೇಲೆ ಬರಲಿದೆ. ಸದ್ಯ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಡಬ್ಬಿಂಗ್ ಶುರು ಮಾಡಿದ ನಟ ಕಿಚ್ಚ
Advertisement
Advertisement
ಹಲವು ವಿಶೇಷಗಳೊಂದಿಗೆ ಮೂಡಿಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಇದೇ ಮೊದಲ ಬಾರಿಗೆ ಬಾಲಿವುಡ್ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಡೀಸ್ ನೃತ್ಯ ಮಾಡಲಿದ್ದಾರೆ. ಸಿನಿಮಾದಲ್ಲಿ ಬರುವ ಕೇವಲ 5 ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಗ್ರೀನ್ ಸಿಗ್ನಲ್ ನೀಡುವ ಜಾಕ್ವೆಲಿನ್, ಇದಕ್ಕಾಗಿ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಅದ್ಭುತ ಅನುಭವ, ನೂತನ ಪಾತ್ರ: ಸುದೀಪ್
Advertisement
ಮೇ ತಿಂಗಳಿನಲ್ಲಿಯೇ ನಡೆಯಬೇಕಾಗಿದ್ದ ಹಾಡಿನ ಶೂಟಿಂಗ್, ಕೊರೊನಾ ಲಾಕ್ಡೌನ್ನಿಂದಾಗಿ ಇದೀಗ ಅದ್ದೂರಿಯಾಗಿ ಬೆಂಗಳೂರಿನಲ್ಲಿ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್
Completed my voice over for #VikrantRona . An awesome experience. A new approach to the role.
Saw few samples if the 3D version,,,
Thrilled to see the world of VR come to life.
Now looking forward to the song shoot.
????????
— Kichcha Sudeepa (@KicchaSudeep) June 30, 2021
ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ದೇಶಕ ಅನುಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ರವರು ಸಿನಿಮಾದ ವಾಯ್ಸ್ ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.
View this post on Instagram