– 8 ವಿಕೆಟ್ ನಷ್ಟಕ್ಕೆ 555 ರನ್
– ದ್ವಿಶತಕ ಸಿಡಿಸಿದ ನಾಯಕ ರೂಟ್
– ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್
ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ನ ಎರಡನೇ ದಿನ ಭಾರತದ ಬೌಲರ್ಗಳು ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್ಗಳ ವಿಕೆಟ್ಗಾಗಿ ಪರದಾಟ ನಡೆಸಿದರೆ. ಇತ್ತ ರೂಟ್ ವಿಶ್ವದಾಖಲೆಯ ದ್ವಿಶತಕ ಬಾರಿಸಿ ಮೆರೆದಾಡಿದ್ದಾರೆ.
Advertisement
ಮೊದಲ ದಿನದ ಅಂತ್ಯಕ್ಕೆ 263 ರನ್ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿ 555 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದೆ.
Advertisement
ಇಂಗ್ಲೆಂಡ್ ಸರದಿಯಲ್ಲಿ 128 ರನ್ ಮಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜೋ ರೂಟ್ 377 ಎಸೆತ ಎದುರಿಸಿ(19 ಬೌಂಡರಿ ಮತ್ತು ಎರಡು ಸಿಕ್ಸರ್)ಸಿಡಿಸಿ 218 ರನ್ಗಳಿಗೆ ನದೀಂಗೆ ವಿಕೆಟ್ ಒಪ್ಪಿಸಿದರು. ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ರೂಟ್, ಈ ದಾಖಲೆ ಬರೆದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.
Advertisement
Advertisement
ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಇನ್ನೊಬ್ಬ ಬ್ಯಾಟ್ಸ್ಮ್ಯಾನ್ ಬೆನ್ ಸ್ಟೋಕ್ಸ್ 82 ರನ್( 118 ಎಸೆತ 10 ಬೌಂಡರಿ, 3 ಸಿಕ್ಸರ್) ಸಿಡಿಸಿ ರೂಟ್ ಅವರೊಂದಿಗೆ 4ನೇ ವಿಕೆಟ್ಗೆ 124ರನ್(221 ಎಸೆತ) ಗಳ ಜೊತೆಯಾಟ ಆಡಿದರು.
That's Stumps on Day 2 of the first @Paytm #INDvENG Test!
2⃣1⃣8⃣ for Joe Root
8⃣2⃣ for Ben Stokes
2⃣ wickets each for @ImIshant, Shahbaz Nadeem, @ashwinravi99 & @Jaspritbumrah93
Scorecard ???? https://t.co/VJF6Q62aTS pic.twitter.com/L6X01vLC9J
— BCCI (@BCCI) February 6, 2021
ಇತ್ತ ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್ಗಳು ಮೆರೆದಾಡುತ್ತಿದ್ದರೆ. ಅತ್ತ ಭಾರತದ 6 ಬೌಲರ್ಗಳು ದಾಳಿ ಮಾಡಿದರೂ ರನ್ ಕಡಿವಾಣ ಹಾಕಲು ಸಾಧ್ಯವಾಗದೇ ಹೆಣಗಾಡಿದದರು. ದಿನದ ಅಂತ್ಯದ ವೇಳೆಗೆ ವಿಕೆಟ್ ಬೇಟೆಯಾಡಲು ಪ್ರಾರಂಭಿಸಿದ ಭಾರತೀಯ ಬೌಲರ್ಗ ಳಾದ ಇಶಾಂತ್ ಶರ್ಮಾ, ಜಸ್ಟ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಶಜಾದ್ ನದೀಂ ತಲಾ 2 ವಿಕೆಟ್ ಪಡೆದು ಮಿಂಚಿದರು.