ತುಮಕೂರು: ಒಂದು ವರ್ಷದ ಹಿಂದೆ ಮಾದುವೆಯಾಗಿದ್ದ ಯುವತಿಯನ್ನು ವರದಕ್ಷಿಣೆ ಆಸೆಗೆ ಪತಿಯೇ ಕೊಲೆಗೈದ ಘಟನೆ ತುಮಕೂರಿನಲ್ಲಿ ನಡೆದಿದೆ.
ಸೌಂದರ್ಯ(19) ಕೊಲೆಯಾದ ದುರ್ದೈವಿ. ಈಕೆಯ ಪತಿ ನಾಗರಾಜು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ಹಾಸನದ ಸಕಲೇಶಪುರದ ನಿವಾಸಿ ಸೌಂದರ್ಯಳನ್ನು, ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ವಿವಾಹವಾಗಿದ್ದರು. ಒಂದು ವರ್ಷದಿಂದಲು ವರದಕ್ಷಿಣೆ ಹಣಕ್ಕಾಗಿ ಸೌಂದರ್ಯಾಳ ಪತಿ ನಾಗರಾಜ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನು ಓದಿ: ತವರು ಮನೆಯಿಂದ ಹಣ ತರುವಂತೆ ಗಲಾಟೆ- ಸಿವಿಲ್ ಎಂಜಿನಿಯರ್ ಪತ್ನಿ ಆತ್ಮಹತ್ಯೆ
Advertisement
Advertisement
ಆರೋಪಿ ನಾಗರಾಜು ತುಮಕೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ತುಮಕೂರಿನ ಸರಸ್ವತಿಪುರಂಗೆ ಬಂದು ನೆಲೆಸಿದ್ದರು. ಆದರೆ ಆಗಿಂದಾಗ್ಗೆ ಇಬ್ಬರ ನಡುವೆ ವರದಕ್ಷಿಣೆ ಹಾಗೂ ಸಣ್ಣಪುಟ್ಟ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಆದರೆ ಕಳೆದ ರಾತ್ರಿ ಹಣಕ್ಕಾಗಿ ಪೀಡಿಸಿದ ನಾಗರಾಜು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ:ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು