ರಾಯಚೂರು: ಕೃಷ್ಣಾ ನದಿ ಪ್ರವಾಹ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಜನ ಹೊರಬರಲು ಪರದಾಟ ನಡೆಸಿದ್ದಾರೆ. ಪ್ರತೀ ಬಾರಿ ನದಿಗೆ ಹೆಚ್ಚು ಪ್ರಮಾಣದ ನೀರು ಬಂದಾಗಲೆಲ್ಲಾ ಇದೇ ಪರಸ್ಥಿತಿಯಿದ್ದು ನಡುಗಡ್ಡೆ ಜನರ ಗೋಳು ದೇವರಿಗೇ ಪ್ರೀತಿ ಎನ್ನುವಂತಾಗಿದೆ.
Advertisement
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಣ್ಣ ಸಣ್ಣ ನಡುಗಡ್ಡೆಗಳ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದ ಜನರಿಗೆ ಈಗ ಆತಂಕ ಹೆಚ್ಚಾಗಿದೆ. ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಹಿನ್ನೆಲೆ ಪರದಾಟ ಶುರುವಾಗಿದೆ. ಹೀಗಾಗಿ ರಭಸವಾಗಿ ಹರಿಯುವ ನೀರಿನಲ್ಲೇ ಜನ ಈಜಿ ಹೊರ ಬರುತ್ತಿದ್ದಾರೆ. ಮಕ್ಕಳನ್ನ ಹೆಗಲ ಮೇಲೆ ಹೊತ್ತು ಅಪಾಯದಲ್ಲೇ ನದಿ ದಾಟುತ್ತಿದ್ದಾರೆ.
Advertisement
Advertisement
24ಕ್ಕೂ ಅಧಿಕ ಕುಟುಂಬಗಳು ಈ ರೀತಿ ಅಲ್ಲಲ್ಲಿ ಇರುವ ಎತ್ತರ ಪ್ರದೇಶಗಳಲ್ಲಿ ಉಳುಮೆ ಮಾಡುತ್ತಾ ನಡುಗಡ್ಡೆಯಲ್ಲೇ ವಾಸ ಮಾಡುತ್ತಿದ್ದಾರೆ. ಪ್ರವಾಹದಿಂದಾಗಿ ಜೀವ ಕೈಯಲ್ಲಿಡಿದು ನದಿ ದಾಟಿ ಬರುತ್ತಿದ್ದಾರೆ. ಇವರ ಜಾನುವಾರುಗಳು, ಕುರಿ, ಎಮ್ಮೆ ನಡುಗಡ್ಡೆಯಲ್ಲೇ ಬಿಟ್ಟು ಬಂದಿದ್ದಾರೆ. ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರೂ ತಮ್ಮ ಸಹಾಯಕ್ಕೆ ಅಧಿಕಾರಿಗಳು ಬರುತ್ತಿಲ್ಲ ಅಂತ ನಡುಗಡ್ಡೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.