ಮುಂಬೈ: ಬಾಲಿವುಡ್ ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್(98)ರವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್ರವರು ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಶೋಕ್ ಶೇಖರ್ ತಿಳಿಸಿದ್ದಾರೆ. ಚಂದ್ರಶೇಖರ್ರವರು 1987ರಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ದಶರಥ ಮಹಾರಾಜನ ಮಂತ್ರಿ ಸುಮಂತನ ಪಾತ್ರದಲ್ಲಿ ಅಭಿನಯಿಸಿದ್ದರು.
Advertisement
Advertisement
1954ರಲ್ಲಿ ವಿ ಶಾಂತಾರಾಮ್ ನಿರ್ದೇಶಿಸಿದ್ದ ಔರತ್ ಥೇರಿ ಯೆಹಿ ಕಹಾನಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಈವರೆಗೂ ಸುಮಾರು 250 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1950 ದಶಕದ ಖ್ಯಾತ ನಟರಾಗಿದ್ದ ಚಂದ್ರ ಶೇಖರ್ರವರು ಕಾಳಿ ಟೋಪಿ ಲಾಲ್ ರುಮಾಲ್, ಬಾರದಾರಿ, ಸ್ಟ್ರೀಟ್ ಸಿಂಗರ್, ರುಸ್ತೋಮ್ ಇ ಬಾಗ್ದಾದ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Advertisement
रामायण में महामंत्री सुमंत्र का चरित्र निभाने वाले श्री चंद्रशेखर जी का आज देहांत हो गया है। उन्हें शांति और सद्गति मिले, राम जी से यही प्रार्थना है ????
सर, आपकी बहुत याद आएगी ???????? pic.twitter.com/1Wj1o6UaBC
— Arun Govil (@arungovil12) June 16, 2021
Advertisement
1964ರಲ್ಲಿ ಚಾ ಚಾ ಚಾ ಎಂಬ ಮ್ಯೂಸಿಕಲ್ ಸಿನಿಮಾವನ್ನು ನಿರ್ದೇಶಿಸಿದ್ದರು. ಅಲ್ಲದೇ 1985ರಿಂದ 1996ರವರೆಗೆ ಸಿನಿ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ