ಬೆಂಗಳೂರು: ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಇಂದು ರಾಮನಗರಕ್ಕೆ ಬಂದಿದ್ದು, ಕನ್ನಡಾಭಿಮಾನ ತೋರಿಸಿದ್ದಾರೆ.
Advertisement
ತಮಿಳಿನಲ್ಲಿ ಆರಂಭವಾಗುತ್ತಿರುವ ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ಉದ್ಘಾಟಿಸಲು ವಿಜಯ್ ಸೇತುಪತಿಯವರು ರಾಮನಗರದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯದವರೊಂದಿಗೆ ಮಾತನಾಡಿದ ಅವರು ಕನ್ನಡದಲ್ಲಿ ಡೈಲಾಂಗ್ವೊಂದನ್ನು ಹೊಡೆದಿದ್ದಾರೆ.
Advertisement
Advertisement
ವಿಶೇಷವೆಂದರೆ ಕರ್ನಾಟಕದಲ್ಲಿ ತಮಗೆ ಮಡಿಕೇರಿ, ಕೂರ್ಗ್ ಸ್ಥಳ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನಾನು ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದೇನೆ. ಮೈಸೂರಿನ ಅರಮನೆ ನೋಡಿದ್ದೇನೆ ಬಹಳ ಸುಂದರವಾಗಿದೆ ಎಂದು ಹೇಳುತ್ತಾರೆ.
Advertisement
ಇಂಗ್ಲೀಷಿನಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ನನನಗೆ ಕನ್ನಡ ಅರ್ಥ ಆಗುತ್ತದೆ ಕನ್ನಡದಲ್ಲಿಯೇ ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ. ನಂತರ ತಾವು ನಟಿಸಿರುವ ಡಬ್ಬಿಂಗ್ ಸಿನಿಮಾದ ಕನ್ನಡದ ಡೈಲಾಂಗ್ವೊಂದನ್ನು ಹೇಳಿ ರಂಜಿಸಿದ್ದಾರೆ. ಅಲ್ಲದೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗ ದರ್ಶನ್ ಪರ ನಿಂತ ಸಂಸದೆ ಸುಮಲತಾ