– ಬಿಜೆಪಿಯೊಳಗಿನ ಕುಟುಂಬ ರಾಜಕಾರಣದ ಸ್ಟೋರಿ
– ‘ಒನ್ ಫ್ಯಾಮಿಲಿ, ಒನ್ ಪೋಸ್ಟ್ ‘ಇನ್ಸೈಡ್’ ಸ್ಟೋರಿ
ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬರಲು ಫ್ಯಾಮಿಲಿ ಪೊಲಿಟಿಕ್ಸ್ ವಿರೋಧ ಸಹ ಒಂದು ಕಾರಣ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯದ ಎಲ್ಲ ಕಮಲ ನಾಯಕರು ನೆಹರು-ಗಾಂಧಿ ಕುಟುಂಬ ರಾಜಕಾರಣದ ಉಲ್ಲೇಖ ಮಾಡಿ ದೊಡ್ಡ ದೊಡ್ಡ ಭಾಷಣ ಮಾಡ್ತಾರೆ. ಆದರೆ ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣ ತಲೆ ಎತ್ತಿದ್ದು, ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕುತ್ತಾ ಅನ್ನೋ ಪ್ರಶ್ನೆಯೊಂದು ಕೇಸರಿ ಗರಡಿಯಲ್ಲಿ ಸದ್ದು ಮಾಡುತ್ತಿದೆ.
Advertisement
ರಾಜ್ಯ ಬಿಜೆಪಿಯಲ್ಲಿ ಕುಟುಂಬ ಹೊರತಾದ ರಾಜಕಾರಣ ಸಾಧ್ಯನಾ ಪ್ರಶ್ನೆಗೆ ಕೇಸರಿ ಹೈಕಮಾಂಡ್ ಸಹ ಉತ್ತರ ಹುಡುಕುತ್ತಿದೆ. ಬಿ.ಎಸ್.ಯಡಿಯೂರಪ್ಪ ನಂತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಹೇಗೆ ಅನ್ನೋದರ ಬಗ್ಗೆ ಬಿಜೆಪಿಯ ದೆಹಲಿ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಸಚಿವ ಸ್ಥಾನ ಮತ್ತು ಅನುದಾನ ವಂಚಿತ ಶಾಸಕರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ಸಲ್ಲಿಕೆಯಾಗಿರುವ ಬಗ್ಗೆಯೂ ತಿಳಿದು ಬಂದಿದೆ.
Advertisement
Advertisement
ಒಂದು ಕುಟುಂಬ, ಒಂದು ಹುದ್ದೆ: ಇದೀಗ ರಾಜ್ಯ ಬಿಜೆಪಿ ಮನೆಯಲ್ಲಿ ಒಂದು ಕುಟುಂಬ ಒಂದು ಹುದ್ದೆ ನಿಯಮ ಪಾಲನೆಯಾಗಬೇಕೆಂಬ ಕೂಗು ಮಾರ್ದನಿಸುತ್ತಿದೆ. ಪ್ರಮುಖ ಹುದ್ದೆಗಳೆಲ್ಲ ಒಂದೇ ಕುಟುಂಬಕ್ಕೆ ಕೇಂದ್ರಿಕೃತವಾಗುತ್ತಿರೋದು ಅತೃಪ್ತರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ, ಆಡಳಿತದಿಂದ ಪುತ್ರ ಮತ್ತು ಕುಟುಂಬವನ್ನ ದೂರವಿಡಿ ಅಂತ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಖಾತೆ ಪುನರ್ ಹಂಚಿಕೆ ಒಂದು ಕುಟುಂಬ, ಒಂದು ಹುದ್ದೆಗೆ ರಾಜ್ಯ ನಾಯಕರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
Advertisement
ಬಿಜೆಪಿಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್
ಅಪ್ಪ – ಮಕ್ಕಳ ಅಧಿಕಾರ
* ಯಡಿಯೂರಪ್ಪ, ಶಿಕಾರಿಪುರ ಶಾಸಕ, ಸಿಎಂ
* ರಾಘವೇಂದ್ರ, ಶಿವಮೊಗ್ಗ ಸಂಸದ
* ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ
* ಬಸವರಾಜು, ತುಮಕೂರು ಸಂಸದ
* ಜ್ಯೋತಿ ಗಣೇಶ್, ತುಮಕೂರು ನಗರ ಶಾಸಕ
* ಸಿ.ಎಂ.ಉದಾಸಿ, ಹಾನಗಲ್ ಶಾಸಕ
* ಶಿವಕುಮಾರ್ ಉದಾಸಿ, ಸಂಸದ ಹಾವೇರಿ
* ಉಮೇಶ್ ಜಾದವ್, ಕಲಬುರಗಿ ಸಂಸದ
* ಅವಿನಾಶ್ ಜಾದವ್, ಚಿಂಚೋಳ್ಳಿ ಶಾಸಕ
* ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ ಶಾಸಕ, ಸಚಿವ
* ಕಾಂತೇಶ್, ಜಿಲ್ಲಾ ಪಂಚಾಯತ್ ಸದಸ್ಯ
ಸಹೋದರರ ಅಧಿಕಾರ
* ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರ ಶಾಸಕ
* ಕರುಣಾಕರ ರೆಡ್ಡಿ ಹರಪನಹಳ್ಳಿ ಶಾಸಕ
* ಜಗದೀಶ್ ಶೆಟ್ಟರ್, ಹು-ಧಾ ಶಾಸಕ, ಸಚಿವ
* ಪ್ರದೀಪ್ ಶೆಟ್ಟರ್, ಪರಿಷತ್ ಸದಸ್ಯ
* ಉಮೇಶ್ ಕತ್ತಿ, ಹುಕ್ಕೇರಿ ಶಾಸಕ, ಸಚಿವ
* ರಮೇಶ್ ಕತ್ತಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ
* ಮುರುಗೇಶ್ ನಿರಾಣಿ, ಬೀಳಗಿ ಶಾಸಕ, ಸಚಿವ
* ಹನುಮಂತ ನಿರಾಣಿ, ಪರಿಷತ್ ಸದಸ್ಯ
* ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ, ಸಚಿವ
* ಬಾಲಚಂದ್ರ ಜಾರಕಿಹೊಳಿ, ಅರಬಾವಿ ಶಾಸಕ
ಪತಿ-ಪತ್ನಿ ಅಧಿಕಾರ
* ಅಣ್ಣಾ ಸಾಹೇಬ್ ಜೊಲ್ಲೆ, ಚಿಕ್ಕೋಡಿ ಸಂಸದ
* ಶಶಿಕಲಾ ಜೊಲ್ಲೆ, ಸಚಿವೆ, ನಿಪ್ಪಾಣಿ ಶಾಸಕ
ಚಿಕ್ಕಪ್ಪ-ಸಹೋದರನ ಮಗನ ಅಧಿಕಾರ
* ರವಿಸುಬ್ರಮಣ್ಯ, ಬಸವನಗುಡಿ ಶಾಸಕ
* ತೇಜಸ್ವಿಸೂರ್ಯ, ಬೆಂಗಳೂರು ದಕ್ಷಿಣ ಸಂಸದ