-ಬೆಂಗ್ಳೂರಿನಲ್ಲಿ 2 ಸಾವಿರದ ಗಡಿಗೆ ಬಂದ ಹೆಮ್ಮಾರಿ
ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಬ್ಲಾಸ್ಟ್ ಆಗಿದ್ದು, ಇವತ್ತು ಒಂದೇ ದಿನ 3,176 ಹೊಸ ಪ್ರಕರಣಗಳು ದಾಖಲಾಗಿವೆ.
ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ 2 ಸಾವಿರದ ಗಡಿಗೆ ಬಂದು ನಿಂತಿದ್ದು, ಇವತ್ತು ಸಿಲಿಕಾನ್ ಸಿಟಿಯ 1,975 ಮಂದಿಗೆ ಸೋಂಕು ತಗುಲಿದೆ. ಒಟ್ಟು 87 ಜನರು ರಾಜ್ಯದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. 87ರ ಪೈಕಿ 60 ಜನರು ಬೆಂಗಳೂರಿನ ನಿವಾಸಿಗಳಾಗಿರುವ ವಿಷಯ ರಾಜಧಾನಿಯ ಜನತೆಯಲ್ಲಿ ಆತಂಕವುನ್ನುಂಟು ಮಾಡಿದೆ.
Advertisement
Advertisement
22,204 ಜನರನ್ನು ತಪಾಸಣೆಗೆ ಒಳಪಡಿಸಿದಾಗ 3,176 ಮಂದಿಗೆ ಸೋಂಕು ತಗುಲಿರೋದು ಬೆಳಕಿಗೆ ಬಂದಿದೆ. ಐಸಿಯುನಲ್ಲಿ ಒಟ್ಟು 579 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22,944ಕ್ಕೇರಿಕೆಯಾಗಿದೆ. ಇದುವರೆಗೂ ರಾಜ್ಯದಲ್ಲಿ 9 ಲಕ್ಷ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.