ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಡೇ ಲಾಕ್ಡೌನ್ ಜಾರಿ ಮಾಡಿದ್ದು, ಇಂದು ಎರಡನೇ ಸಂಡೇ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಲ್ಲೊಂದು ಇಲ್ಲೊಂದು ಟೂ ವೀಲರ್ ಹೊರತು ಪಡಿಸಿದರೆ ವಾಹನಗಳ ಓಡಾಟವೂ ಇಲ್ಲ. ಅತ್ಯವಶ್ಯಕ ವಸ್ತುಗಳಾದ ಹಾಲು, ದಿನಸಿ, ದಿನಪತ್ರಿಕೆ ವಿತರಣೆ ಹೊರತು ಪಡಿಸಿ ಎಲ್ಲವೂ ಲಾಕ್ಡೌನ್ ಆಗಿದೆ. ಕಳೆದ ವಾರ ಸಹ ಜನ ಸ್ವಯಂ ನಿಯಂತ್ರಣ ಹಾಕಿಕೊಂಡು ಸಂಡೇ ಲಾಕ್ಡೌನ್ ಯಶಸ್ವಿ ಮಾಡಿದ್ದರು.
Advertisement
Advertisement
ನಗರದ ಬಹುತೇಕ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿದ್ದು, ಕೇವಲ ಅತ್ಯವಶ್ಯಕ ವಾಹನಗಳಷ್ಟೆ ರಸ್ತೆಯಲ್ಲಿ ಓಡಾಟ ಮಾಡುತ್ತಿವೆ. ನಗರದ ಪ್ರಮುಖ ರಸ್ತೆಗಳು ಬ್ಯಾರಿಕೇಡ್ ಹಾಕಿ ಪೊಲೀಸರು ಕ್ಲೋಸ್ ಮಾಡಿದ್ದಾರೆ. ಇನ್ನೂ ಕೆಲವು ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನಗರದ ಎಲ್ಲಾ ಏರಿಯಾಗಳಲ್ಲಿ ಹೊಯ್ಸಳದಿಂದ ಗಸ್ತು ಮಾಡಲಾಗುತ್ತಿದೆ.
Advertisement
Advertisement
ಮೆಜೆಸ್ಟಿಕ್ ಬಸ್ ನಿಲ್ದಾಣ, ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಎಂದಿನಂತೆ ಹಾಲು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಮನೆಯಿಂದ ಬರುತ್ತಿದ್ದಾರೆ. ಇತ್ತ ತುಮಕೂರು ರಸ್ತೆ ಕೂಡ ಖಾಲಿ ಖಾಲಿಯಾಗಿದ್ದು, ಬೆರೆಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿವೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಕ್ಲೋಸ್ ಆಗಿದ್ದು, ಅಲ್ಲಿಯೂ ಜನರ ಓಡಾಟವು ಇಲ್ಲದಂತಾಗಿದೆ.
ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇನ್ನೂ ಏರ್ಪೋರ್ಟ್ಗೆ ಕ್ಯಾಬ್ ಮತ್ತು ಸ್ವಂತ ವಾಹನಗಳಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಏರ್ ಟಿಕೆಟ್ ಮತ್ತು ಐಡಿ ಕಾರ್ಡ್ನೊಂದಿಗೆ ಏರ್ಪೋರ್ಟ್ಗೆ ಹೋಗಬಹುದು.