-ರಾಜಧಾನಿಯಲ್ಲಿ ಕೊರೊನಾ ಸ್ಫೋಟ, 3,284 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ. ಇಂದು ರಾಜ್ಯದಲ್ಲಿ 8,580 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆಯಾಗಿದೆ.
ಮರಣ ಕೇಕೆ ಮುಂದುವರಿಸಿರುವ ಕೊರೊನಾಗೆ ಇಂದು 133 ಸೋಂಕಿತರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 5,091ಕ್ಕೆ ಏರಿಕೆ ಕಂಡಿದೆ. ಇಂದು 7,249 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 83,608 ಸಕ್ರಿಯ ಪ್ರಕರಣಗಳಿವೆ. 760 ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 67,066 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.
Advertisement
Karnataka conducted 67,066 tests today. So far we conducted 25,80,621 tests across 108 labs in the state. 8,580 cases were reported in the state today & 7,249 recoveries. 3,284 new cases reported in Bengaluru & 2,630 recoveries. State's recovery rate stands at 70.47%.@BSYBJP pic.twitter.com/RN1VLtOEyw
— Dr Sudhakar K (@mla_sudhakar) August 26, 2020
Advertisement
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಮೂರು ಸಾವಿರದ ಗಡಿ ದಾಟಿದ್ದು, ಇಂದು 3,284 ಮಂದಿಗೆ ಸೋಂಕು ತಗುಲಿದೆ. ಸಿಲಿಕಾನ್ ಸಿಟಿಯಲ್ಲಿಂದು 31 ಜನರು ಮರಣವಪ್ಪಿದ್ದು, ಇದುವರೆಗೂ 1,786 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 1,15,371ಕ್ಕೆ ಏರಿಕೆಯಾಗಿದೆ.
Advertisement
With more than 2 lakh discharges, recovery rate of 70%, less than 1% of active cases being treated in ICU, mortality rate of 1.69%, Karnataka's Covid situation is steadily improving. I appreciate the doctors & all corona warriors for their relentless hard work.@PMOIndia @BSYBJP pic.twitter.com/DCxg2qVuEn
— Dr Sudhakar K (@mla_sudhakar) August 26, 2020
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 154, ಬಳ್ಳಾರಿ 510, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 136, ಬೆಂಗಳೂರು ನಗರ 3,284, ಬೀದರ್ 42, ಚಾಮರಾಜನಗರ 51, ಚಿಕ್ಕಬಳ್ಳಾಪುರ 87, ಚಿಕ್ಕಮಗಳೂರು 97, ಚಿತ್ರದುರ್ಗ 78, ದಕ್ಷಿಣ ಕನ್ನಡ 314, ದಾವಣಗೆರೆ 233, ಧಾರವಾಡ 255, ಗದಗ 124, ಹಾಸನ 154, ಕಲಬುರಗಿ 180, ಕೊಡಗು 26, ಕೋಲಾರ 88, ಕೊಪ್ಪಳ 158, ಮಂಡ್ಯ 155, ಮೈಸೂರು 951, ರಾಯಚೂರು 136, ರಾಮನಗರ 47, ಶಿವಮೊಗ್ಗ 166, ತುಮಕೂರು 88, ಉಡುಪಿ 251, ಉತ್ತರ ಕನ್ನಡ 129, ವಿಜಯಪುರ 131 ಮತ್ತು ಯಾದಗಿರಿಯಲ್ಲಿ 102 ಮಂದಿಗೆ ಸೋಂಕು ತಗುಲಿದೆ.