ಬೆಂಗಳೂರು: ಮೊದಲ ಬಾರಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕುಸುಮಾ ಅವರಿಗೆ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಸೋಲಾಗಿದೆ. ಬಿಜೆಪಿಯ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
Advertisement
ಕಾಂಗ್ರೆಸ್ ಸೋತಿದ್ದು ಎಲ್ಲಿ?
ಕುಸುಮಾ ಹೊಸ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೇ ಕ್ಷೇತ್ರ ಪರಿಚಯ ಇರಲಿಲ್ಲ. ಒಕ್ಕಲಿಗ ಜಾತಿ ಸಮೀಕರಣದ ನಿರೀಕ್ಷೆ ಮಟ್ಟದಲ್ಲಿ ಕೈ ಹಿಡಿಯದಿರುವುದು.
Advertisement
Advertisement
ಡಿಕೆ ಸಹೋದರರು ಮಾತ್ರ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡು, ಉಳಿದವರು ನಾಮಕಾವಸ್ಥೆ ಪ್ರಚಾರ ಮಾಡಿದ್ದರು. ಜಾತಿ ರಾಜಕಾರಣವನ್ನೇ ಹೆಚ್ಚಾಗಿ ಬಿಂಬಿಸಿ ಪ್ರಚಾರ ಮಾಡಿದ್ದರು.
Advertisement
ಮುನಿರತ್ನ ಅಭಿವೃದ್ಧಿ ಅಸ್ತ್ರಕ್ಕೆ ಕುಸುಮಾ ಬಳಿ ಅನುಕಂಪದ ಪ್ರತ್ಯಾಸ್ತ್ರ ಕೆಲಸ ಮಾಡಲಿಲ್ಲ. ಮುನಿರತ್ನ ಪಕ್ಷ ತೊರೆಯುತ್ತಿದ್ದಂತೆ ಕಾರ್ಯಕರ್ತರು, ಕಾರ್ಪೋರೇಟರ್ ಗಳು ಜೊತೆಯಲ್ಲೇ ಹೋಗಿದ್ದು ಕಾಂಗ್ರೆಸ್ಗೆ ದೊಡ್ಡ ಹಿನ್ನಡೆ ಆಯಿತು.
ಸ್ಥಳಿಯರಿಗಿಂತ ಹೆಚ್ಚಾಗಿ ಹೊರಗಿನವರನ್ನೆ ಕರೆತಂದು ಪ್ರಚಾರ ನಡೆಸಿದ್ದಾರೆ ಎಂಬ ಬಿಜೆಪಿಯವರ ಆರೋಪ. ಬಿಜೆಪಿಯಂತೆ ಕೇಡರ್ ಬೇಸ್ ಸ್ಟ್ರಾಂಗ್ ಇಲ್ಲದೆ ಪರದಾಡಿದ್ದರಿಂದ ಸೋಲಾಗಿದೆ.