ಬೆಂಗಳೂರು: ಸ್ಯಾಂಡಲ್ವುಡ್, ಟಾಲಿವುಡ್ನಲ್ಲಿ ಸಾಕಷ್ಟು ಹೆಸರು ಗಳಿಸಿ, ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಕ್ವಾರಂಟೈನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಹೆಚ್ಚು ಹೊತ್ತು ಇಂಟರಾಕ್ಟ್ ಮಾಡುತ್ತಿದ್ದಾರೆ. ಸದ್ಯ ರಶ್ಮಿಕಾ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ. ರಶ್ಮಿಕಾ ಬಿಟ್ಟು ನನಗೆ ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಲಿಲ್ಲಿ ಪ್ರಶ್ನೆ ಮಾಡಿದ್ದಾರೆ.
Advertisement
ಇತ್ತೀಚೆಗೆ ರಶ್ಮಿಕಾ ಅವರನ್ನ ಮನೆಯಲ್ಲಿ ಪ್ರೀತಿಯಿಂದ ಮೋನಿ ಎಂದು ಕರೆಯುತ್ತಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಈಗ ಟ್ವೀಟ್ ಮಾಡಿರುವ ರಶ್ಮಿಕಾ, ನನ್ನ ಹೆಸರನ್ನ ಬದಲಾಯಿಸಿ, ಬೇರೆ ಹೆಸರನ್ನು ಇಟ್ಟುಕೊಳ್ಳುವುದಾದರೆ ಯಾವ ಹೆಸರಿಟ್ಟುಕೊಳ್ಳಲಿ? ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಪ್ರಶ್ನೆ ಹಾಕಿದ್ದಾರೆ. ರಶ್ಮಿಕಾ ಪ್ರಶ್ನೆಗೆ ಅಭಿಮಾನಿಗಳು ಒಂದರ ಮೇಲೊಂದು ರೀ-ಟ್ವೀಟ್ ಮಾಡುತ್ತಾ ಅನೇಕ ಹೆಸರುಗಳನ್ನು ಹೇಳಿದ್ದಾರೆ.
Advertisement
Fun question: if I had to change my name – what would you want it to be? Be nice now! ????????????
— Rashmika Mandanna (@iamRashmika) May 20, 2020
Advertisement
ಕೆಲವರು ನಿಮಗೆ ಸಾನ್ವಿ ಹೆಸರು ಸೂಟ್ ಆಗುತ್ತೆ ಅಂದ್ರೆ, ಇನ್ನು ಕೆಲವರು ಲಿಲ್ಲಿ, ತಳಪತಿ ಮಂದಣ್ಣ, ಗೀತಾ, ರೋಸ್ ಹೆಸರು ಸೂಪರ್ ಆಗಿರುತ್ತೆ ಎಂದು ರೀ-ಟ್ವೀಟ್ ಮಾಡಿದ್ದಾರೆ. ಆದರೆ ರಶ್ಮಿಕಾ ಅವರ ಕಟ್ಟಾ ಅಭಿಮಾನಿಗಳು ಮಾತ್ರ ಯಾವುದೂ ಬೇಡ, ಈಗ ಇರುವ ರಶ್ಮಿಕಾ ಹೆಸರೇ ಕ್ಯೂಟ್ ಆಗಿದೆ ಎಂದು ಸಲಹೆ ನೀಡಿದ್ದಾರೆ.
Advertisement
https://twitter.com/RashmikaHearts/status/1263123588338483201
ಈ ಹಿಂದೆ ರಶ್ಮಿಕಾ ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿ, ಇಡೀ ದಿನ ನಿಮಗಾಗಿ ಮೀಸಲಿಟ್ಟಿದ್ದೇನೆ. ನೀವು ಹೇಳಿದ ಬಣ್ಣದ ಡ್ರೆಸ್ ಹಾಕುತ್ತೇನೆ. ನೀವು ಹೇಳಿದ ತಿಂಡಿ ಇನ್ನುತ್ತೇನೆ. ನೀವು ಹೇಳಿದಂತೆಯೇ ನಡೆದುಕೊಳ್ತೇನೆ ಅಂತ ಪೋಸ್ಟ್ ಮಾಡಿದ್ದರು. ಆ ಟ್ವೀಟ್ ಕೂಡ ಸಖತ್ ವೈರಲ್ ಆಗಿತ್ತು, ಸಾವಿರಾರು ಅಭಿಮಾನಿಗಳು ರೀ-ಟ್ವೀಟ್ ಮಾಡಿ ಕೋರಿಕೆ ಹೇಳಿ ಖುಷಿಪಟ್ಟಿದ್ದರು. ಅಲ್ಲದೆ ಅಭಿಮಾನಿಗಳು ಹೇಳಿದಂತೆ ನಡೆದುಕೊಂಡು ಕೊಡಗಿನ ಕುವರಿ ಫ್ಯಾನ್ಸ್ ಮನ ಗೆದ್ದಿದ್ದರು.
Rashmika is the best name for you and you deserve that name ❤️❤️❤️ pic.twitter.com/kBoiwq7nQO
— soham_Kadam (@iamsohamkadam) May 20, 2020
ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ರಶ್ಮಿಕಾ ಇದೀಗ ದಕ್ಷಿಣ ಭಾರತದಲ್ಲೇ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಟಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಈಗಲೂ ಬಹುತೇಕ ಸ್ಟಾರ್ ನಟರ ಮೊದಲ ಆಯ್ಕೆಯೇ ರಶ್ಮಿಕಾ ಮಂದಣ್ಣ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅರ್ಜುನ್ ಅಭಿನಯದ ಬಹುಭಾಷಾ ಚಿತ್ರ ‘ಪುಷ್ಪ’ಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಕನ್ನಡದ ‘ಪೊಗರು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ನಂತರ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.