ದುಬೈ: ಡೆಲ್ಲಿ ಕ್ಯಾಪಿಟಲ್ ತಂಡದ ಶಿಸ್ತುಬದ್ಧವಾದ ಬೌಲಿಂಗ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-2020ಯಲ್ಲಿ ಎರಡನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ತಂಡ 44 ರನ್ಗಳ ಅಂತರದಲ್ಲಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು. ಕೊನೆಯಲ್ಲಿ ಧೋನಿ ಇದ್ದರೂ ಯಾವುದೇ ಮ್ಯಾಜಿಕ್ ನಡೆಯಲಿಲ್ಲ.
Advertisement
A much needed 50-run partnership between @faf1307 & @JadhavKedar for #CSK.
Live – https://t.co/Ju3tim4Ffx #Dream11IPL #CSKvDC pic.twitter.com/1woBZMsZXJ
— IndianPremierLeague (@IPL) September 25, 2020
Advertisement
ಡೆಲ್ಲಿ ಕ್ಯಾಪಿಟಲ್ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬಾಲಿಂಗ್ ಮಾಡಿದರು. ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಅಕ್ಷರ್ ಪಟೇಲ್ ಪಟೇಲ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 18 ರನ್ ಕೊಟ್ಟು ಒಂದು ವಿಕೆಟ್ ಪಡೆದರು. ಇವರ ನಂತರ ಅನ್ರಿಚ್ ನಾಟ್ರ್ಜೆ ಅವರು 4 ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 21 ರನ್ ನೀಡಿದರು. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ ರಬಡಾ ನಾಲ್ಕು ಓವರ್ ಎಸೆದು ಮೂರು ವಿಕೆಟ್ ಕಿತ್ತು 26 ರನ್ ನೀಡಿದರು.
Advertisement
Hey @SDhawan25 where did you get those uber cool glasses from? @KP24 wants to know ????#Dream11IPL #CSKvDC pic.twitter.com/K7SOtLZ7Gm
— IndianPremierLeague (@IPL) September 25, 2020
Advertisement
ಚೆನ್ನೈಗೆ ಆರಂಭಿಕ ಅಘಾತ ನೀಡಿದ ಅಕ್ಷರ್ ಪಟೇಲ್ 14 ರನ್ಗಳಿಸಿ ಆಡುತ್ತಿದ್ದ ಶೇನ್ ವ್ಯಾಟ್ಸನ್ ಹೆಟ್ಮಿಯರ್ ಅವರಿಗೆ ಕ್ಯಾಚ್ ಇತ್ತು ಔಟ್ ಆದರು. ನಂತರ ಪವರ್ ಪ್ಲೇ ಮುಕ್ತಾಯದ ಕೊನೆ ಬಾಲಿನಲ್ಲಿ ಮುರಳಿ ವಿಜಯ್ ಅವರು ಕೂಡ ಅನ್ರಿಚ್ ನಾಟ್ರ್ಜೆ ಅವರಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಮೂಲಕ ಚೆನ್ನೈ ಆರು ಓವರ್ ಮುಕ್ತಾಯದ ವೇಳೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 34 ರನ್ ಪೇರಿಸಿತು.
???????????????????? 4️⃣
???????????????? 2️⃣3️⃣
???????????????? 5️⃣.8️⃣0️⃣
Mishi Bhai delivers a brilliant spell as usual ????#CSKvDC #Dream11IPL #YehHaiNayiDilli pic.twitter.com/Rt1d82rqow
— Delhi Capitals (@DelhiCapitals) September 25, 2020
ಮೊದಲಿನಿಂದಲೂ ಡೆಲ್ಲಿ ಬೌಲರ್ ಚೆನ್ನೈ ಬ್ಯಾಟ್ಸ್ ಮ್ಯಾನ್ಗಳ ಮೇಲೆ ಒತ್ತಡ ಹಾಕಿದರು. ಇದೇ ವೇಳೆ ಇಲ್ಲದ ರನ್ ಕದಿಯಲು ಹೋಗಿ ಋತುರಾಜ್ ಗಾಯಕವಾಡ್ ಅವರು ರನ್ ಔಟ್ ಆದರು. ನಂತರ ಜೊತೆಯಾದ ಕೇದಾರ್ ಜಾಧವ್ ಮತ್ತು ಫಾಫ್ ಡು ಪ್ಲೆಸಿಸ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ಪ್ಲೆಸಿಸ್ ಅವರಿಗೆ ಹೆಟ್ಮಿಯರ್ ಅವರು ಒಂದು ಜೀವದಾನ ಕೂಡ ನೀಡಿದರು.
ಇದೇ ವೇಳೆ 39 ಬಾಲಿಗೆ 54 ರನ್ ಸಿಡಿಸಿದ್ದ ಜೊತೆಯಾಟವನ್ನು ಅನ್ರಿಚ್ ನಾಟ್ರ್ಜೆ ಮುರಿದು ಹಾಕಿದರು. 26 ರನ್ ಗಳಿಸಿ ಆಡುತ್ತಿದ್ದ ಜಾಧವ್ ಅವರನ್ನು ನಾಟ್ರ್ಜೆ ಅವರು ಎಲ್ಬಿಡಬ್ಯ್ಲೂಗೆ ಬೀಳಿಸಿದರು. ನಂತರ ರಬಡಾ ಅವರ ಬೌಲಿಂಗ್ನಲ್ಲಿ 43ರನ್ ಸಿಡಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಔಟ್ ಆದರು. ಇದಾದ ನಂತರ ಕೊನೆಯ ಓವರಿನಲ್ಲಿ ನಾಯಕ ಧೋನಿಯವರು ಪಂತ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇದಾದ ನಂತರ ಜಡೇಜಾ ಅವರು ಕೂಡ ರಬಡಾ ಬೌಲಿಂಗ್ಗೆ ಬಲಿಯಾದರು.