ಬೆಳಗಾವಿ: ಯೋಧರೊಬ್ಬರ ಮನೆಯ ಮೇಲೆ ಕಲ್ಲುಗಳನ್ನು ಎಸೆದು ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಮಹಾನಗರದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಕರ್ತವ್ಯನಿರತರಾಗಿರುವ ಯೋಧ ದೀಪಕ್ ಪಾಟೀಲ್ ಎಂಬವರ ಮನೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್ – ಟಿವಿ ಸೇರಿದಂತೆ ಇತರ ವಸ್ತುಗಳನ್ನು ಧ್ವಂಸ ಮಾಡಿ ಇಡೀ ಕುಟುಂಬವನ್ನು ಊರಿನವರು ಬಹಿಷ್ಕಾರ ಹಾಕಿದ್ದಾರೆ.
Advertisement
Advertisement
ಸದ್ಯ ಈ ಕಿರುಕಳ ಸಹಿಸಲಾರದೆ ದೇಶ ಕಾಯುವ ಯೋಧನ ಕುಟುಂಬ ಕಾಕತಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದರೂ ಅಲ್ಲಿನ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ಮಕ್ಕಳು ದಿನಸಿ ಅಂಗಡಿಗೆ ಹೋಗಿ ಬಿಸ್ಕತ್ತು ಕೊಡಿ ಎಂದರೆ ಅಂಗಡಿಯವರು ನಮ್ಮಲ್ಲಿ ಬಿಸ್ಕತ್ತು ಇಲ್ಲ ಎಂದು ಮಕ್ಕಳಿಗೆ ಹೇಳಿ ಮರಳಿ ಕಳಿಸುತ್ತಾರೆ. ನಂತರ ಮಕ್ಕಳು ಅಮ್ಮನ ಬಳಿ ಬಂದು ಅಳುತ್ತಾರೆ. ಜೊತೆಗೆ ದೀಪಕ್ ಪಾಟೀಲ್ರವರ ದ್ವಿಚಕ್ರ ವಾಹನಕ್ಕೂ ಗ್ರಾಮಸ್ಥರು ಬೆಂಕಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.
Advertisement
Advertisement
ಯೋಧ ದೀಪಕ್ ಸಂಬಂಧಿ ಅಶೋಕ್ ಪಾಟೀಲ್ ಅವರಿಗೆ ಸೇರಿದ ಐದು ಎಕರೆ ಜಮೀನು ವಿವಾದದಲ್ಲಿದ್ದು, ಗ್ರಾಮಸ್ಥರಿಗೂ ಹಾಗೂ ಯೋಧನ ಕುಟುಂಬಕ್ಕೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಈಗ ಯೋಧ ನ್ಯಾಯಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ