– ಹಣ ಕೊಟ್ರೂ ವಿಡಿಯೋ ಡಿಲೀಟ್ ಇಲ್ಲ
– ಮತ್ತಷ್ಟು ಹಣ ನೀಡುವಂತೆ ಬೇಡಿಕೆ
ಬೆಂಗಳೂರು: ಯುವತಿಯ ಜೊತೆ ವಾಟ್ಸಪ್ನಲ್ಲಿ ನಗ್ನ ವಿಡಿಯೋ ಕಾಲ್ ಮಾಡಿ ಯುವಕನೊಬ್ಬ ಪೇಚಿಗೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೊಡ್ಡನೆಕ್ಕುಂದಿ ನಿವಾಸಿ 26 ವರ್ಷದ ಯುವಕ ಅಪರಿಚಿತ ಯುವತಿಯಿಂದ ಮೋಸ ಹೋಗಿದ್ದಾನೆ. ಯುವಕ 22 ಸಾವಿರ ಹಣ ಕಳೆದುಕೊಂಡಿದ್ದಲ್ಲದೇ ಆತನಿಗೆ ಎಟಿಎಂ ಕಾರ್ಡ್ ಫೋಟೋ ಕೂಡ ಕಳುಹಿಸಿದ್ದಾನೆ. ಇದೀಗ ಯುವಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ.
Advertisement
Advertisement
ಮೋಸ ಹೋದ ಯುವಕ ಸೋಶಿಯಲ್ ಮೀಡಿಯಾದ ಮೂಲಕ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಇಬ್ಬರು ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದು, ಎರಡ್ಮೂರು ದಿನಗಳವರೆಗೆ ಚ್ಯಾಟಿಂಗ್ ಮಾಡಿದ್ದಾರೆ. ಬಳಿಕ ಆಕೆಯ ಜತೆ ವಾಟ್ಸಪ್ನಲ್ಲಿ ನಗ್ನವಾಗಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ. ಈ ವಿಡಿಯೋವನ್ನು ಯುವತಿ ರೆಕಾರ್ಡ್ ಮಾಡಿ ಅಪರಿಚಿತ ವ್ಯಕ್ತಿಗೆ ನೀಡಿದ್ದಾಳೆ. ಈಗ ಅಪರಿಚಿತ ವ್ಯಕ್ತಿಯೊಬ್ಬ ವಿಡಿಯೋ ಇಟ್ಟುಕೊಂಡು ಈಗ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ.
Advertisement
Advertisement
ದೂರಿನಲ್ಲಿ ಏನಿದೆ?
ನಾನು ಅಪರಿಚಿತ ಹುಡುಗಿಯ ಜೊತೆ ವಾಟ್ಸಪ್ನಲ್ಲಿ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದನ್ನು ಅಪರಿಚಿತ ವ್ಯಕ್ತಿಯು ಸ್ಕ್ರೀನ್ ರಿಕಾರ್ಡಿಂಗ್ ಮಾಡಿಕೊಂಡು ನನಗೆ ಫೋನ್ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಅಲ್ಲದೇ ಗೂಗಲ್ ಪೇ ಮೂಲಕ ಹಣ ಹಾಕುವಂತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ನನ್ನ ಎಟಿಎಂ ಕಾರ್ಡ್ ಫೋಟೋ ಕಳುಹಿಸುವಂತೆ ಕೇಳಿದ್ದಾನೆ. ಒಂದು ವೇಳೆ ಹಣ ಮತ್ತು ಎಟಿಎಂ ಕಾರ್ಡ್ ಫೋಟೋ ಕಳುಹಿಸದಿದ್ದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಕೊನೆಗೆ ಯುವಕ ಅಪರಿಚಿತ ವ್ಯಕ್ತಿಗೆ 22 ಸಾವಿರ ಹಣವನ್ನು ಕಳುಹಿಸಿದ್ದಾನೆ. ಅಲ್ಲದೇ ಎಟಿಎಂ ಕಾರ್ಡ್ ಫೋಟೋ ಕೂಡ ಕಳುಹಿಸಿದ್ದಾನೆ. ಆದರೆ ಅಪರಿಚಿತ ವ್ಯಕ್ತಿಯೂ ವಿಡಿಯೋ ಡಿಲೀಟ್ ಮಾಡದೇ ಮತ್ತೆ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ಆದ್ದರಿಂದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.