ಬೆಂಗಳೂರು: ಹಿರಿಯ ನಟ ಶಂಖನಾದ ಅರವಿಂದ್ ಹಾಗೂ ನಿರ್ದೇಶಕ ರೇಣುಕಾ ಶರ್ಮಾ ಅವರ ಅಗಲಿಕೆಗೆ ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ ಎಂದು ನಟ ಜಗ್ಗೇಶ್ ಕಂಬನಿ ಮಿಡಿದು ಸಾಮಾಜಿಕ ಜಾಲತಾಣದಲ್ಲಿ ನೋವಿನಿಂದ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಏನೆಂದು ಬರೆಯಲಿ, ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ ಯಾವ ಅಕ್ಷರದಿಂದ ಇವರ ಮನೆಯ ನೊಂದವರನ್ನು ಸಮಾಧಾನ ಪಡಿಸಲಿ? ಒಂದಂತೂ ಹೇಳುವೆ ನಿಮ್ಮಗಳ ಜೊತೆ ನಾನು ಕಳೆದ ಸಮಯ ಮಾತ್ರ ಅವಿಸ್ಮರಣೀಯ. ನಿಮ್ಮ ಆತ್ಮ ರಾಯರಲ್ಲಿ ಲೀನವಾಗಲಿ. ನಿಮ್ಮ ಮನೆಯವರಿಗೆ ಧೈರ್ಯ ಆ ರಾಯರೆ ತುಂಬಲಿ. ಓಂ ಶಾಂತಿ….ಸದ್ಗತಿ ಎಂದು ಬರೆದುಕೊಂಡಿದ್ದಾರೆ.
Advertisement
ಏನೆಂದು ಅಕ್ಷರ ಠಂಕಿಸಲಿ??
ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ??
ಯಾವ ಅಕ್ಷರದಿಂದ ಇವರ ಮನೆಯ ನೊಂದವರ ಸಮಾಧಾನ ಪಡಿಸಲಿ??
ಒಂದಂತು ಠಂಕಿಸುವೆ ನಿಮ್ಮಗಳ ಜೊತೆ ನಾ ಕಳೆದ ಸಮಯ ಅವಿಸ್ಮರಣೀಯ!!
ನಿಮ್ಮ ಆತ್ಮ ರಾಯರಲ್ಲಿ ಲೀನವಾಗಲಿ!!
ನಿಮ್ಮ ಮನೆಯವರಿಗೆ ಧೈರ್ಯ ಆ ರಾಯರೆ ತುಂಬಲಿ!!
ಓಂ ಶಾಂತಿ….ಸದ್ಗತಿ… pic.twitter.com/AIGMgGfaMo
— ನವರಸನಾಯಕ ಜಗ್ಗೇಶ್ (@Jaggesh2) May 7, 2021
Advertisement
ಜ.23ರಂದು ಶಂಖನಾದ ಅರವಿಂದ್ ಅವರ ಪತ್ನಿ ರಮಾ ಅವರೂ ಸಹ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ರಮಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ನಿನ್ನೆಯಷ್ಟೆ ಕವಿರತ್ನ ಕಾಳಿದಾಸ ಸಿನಿಮಾದ ನಿರ್ದೇಶಕ ರೇಣುಕಾ ಶರ್ಮಾ ಅವರೂ ಸಹ ಕೊರೊನಾದಿಂದ ಕೊನೆಯುಸಿರೆಳೆದಿದ್ದರು. ಅದಕ್ಕೂ ಹಿಂದೆ ನಿರ್ಮಾಪಕ ರಾಮು, ಎಂ. ಚಂದ್ರಶೇಖರ್, ನಿರ್ದೇಶಕ ನವೀನ್ ಕುಮಾರ್ ಸೇರಿದಂತೆ ಇನ್ನೂ ಹಲವಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದನ್ನು ಓದಿ: ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ಕೊರೊನಾ ವೈರಸ್ಗೆ ಬಲಿ