ಕೊಪ್ಪಳ: ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಬೇಕು. ಮುಖ್ಯಮಂತ್ರಿಗಳ ಬಗ್ಗೆ ಗೌರವ ಇಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯತ್ನಾಳ್ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಯತ್ನಾಳ್ ಹಿರಿಯರು, ಅವರು ಮುಖ್ಯಮಂತ್ರಿ ಬಗ್ಗೆ ಮಾತಾಡುವಾಗ ಅತ್ಯಂತ ಗೌರವಯುತವಾಗಿ ಮಾತಾಡಬೇಕು. ಪ್ರತಿ ಸಲ ಕೀಳು ಮಟ್ಟದಲ್ಲಿ ಮಾತಾನಡೋದು ಸರಿಯಲ್ಲ ಎಂದರು.
Advertisement
Advertisement
ನಿಮಗೆ ಇಷ್ಟ ಇಲ್ಲ ಅಂದ್ರೆ ನೀವು ಅರಾಮಾಗಿ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಿ. ದುಷ್ಟ ಸಂಹಾರ ಮಾಡಬೇಕು ಅನ್ನೋದು ಸರಿ ಅಲ್ಲ. ಯತ್ನಾಳ್ ಬಹಳಷ್ಟು ಹಿರಿಯರಿದ್ದಾರೆ, ಪಕ್ಷದ ಸಿಸ್ಟಮ್ ಸರಿ ಇಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ಹೇಳಿದರು. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್ವೈ ವಿರುದ್ಧ ಗುಡುಗಿದ ಯತ್ನಾಳ್
Advertisement
ಯಡಿಯೂರಪ್ಪನವರೇ ಎರಡು ವರ್ಷ ಮುಖ್ಯಮಂತ್ರಿ. ಅವರ ಮಗನ ಬಗ್ಗೆ ಮಾತಾಡೋದು ಸರಿ ಅಲ್ಲ. ನಿನ್ನ ಮಗನ ಬಗ್ಗೆ ಯೋಚನೆ ಮಾಡಬೇಕು ಎಂದು ಯತ್ನಾಳ್ ಗೆ ದಡೇಸಗೂರು ಟಾಂಗ್ ನೀಡಿದರು. ಕನಕಗಿರಿ ಕ್ಷೇತ್ರದ 2 ಲಕ್ಷ ಮತದಾರರ ಪರವಾಗಿ ನಾನು ವಿನಂತಿ ಮಾಡುತ್ತೇನೆ. ಯಡಿಯೂರಪ್ಪ ಅವರ ಬಗ್ಗೆ ಗೌರವಯುತವಾಗಿ ಮಾತಾನಾಡಬೇಕೆಂದರು.