ನವದೆಹಲಿ: ಮ್ಯಾಗಿ ಅಂದರೆ ಯಾರಿಗಿಷ್ಟ ಇಲ್ಲಾ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮ್ಯಾಗಿ ಎಲ್ಲರಿಗೂ ಅಚ್ಚು-ಮೆಚ್ಚು. 2 ನಿಮಿಷದಲ್ಲಿ ತಯಾರಾಗುವ ಬಿಸಿ ಬಿಸಿಯಾದ ಮ್ಯಾಗಿಯನ್ನು ನೋಡಿದವರು ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದ್ಯ ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
Advertisement
ನಿಮ್ಮ ನೆಚ್ಚಿನ ಮ್ಯಾಗಿ ಇದೀಗ ಮದುವೆ ಮನೆಯ ಊಟದ ಮೆನು ಲಿಸ್ಟ್ಗಳಲ್ಲಿ ಕೂಡ ಒಂದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡಿದ್ದಾಗ ಎಷ್ಟೋ ಮಂದಿ ಲಾಕ್ ಡೌನ್ ಸಮಯದಲ್ಲಿ ಮ್ಯಾಗಿಯನ್ನೇ ಆಹಾರವಾಗಿ ಅವಲಂಬಿಸಿದ್ದರು.
Advertisement
ಇತ್ತೀಚೆಗೆ ಪತ್ರಕರ್ತೆ ಸೌಮ್ಯ ಲೇಖನಿ ಎಂಬವರು ತಮ್ಮ ಸೋದರ ಸಂಬಂಧಿ ವಿವಾಹ ಮಹೋತ್ಸವಕ್ಕೆ ಹೋಗಿದ್ದಾಗ, ಅಲ್ಲಿನ ಫುಡ್ ಕೌಂಟರ್ನಲ್ಲಿ ಮ್ಯಾಗಿ ಕೂಡ ಇರುವುದನ್ನು ಕಂಡು ಮೊಬೈಲ್ ನಲ್ಲಿ ಫೋಟೋವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ ಕ್ಯಾಪ್ಷನ್ನಲ್ಲಿ ನನ್ನ ಸೋದರ ಸಂಬಂಧಿ ಯೋಚಿಸಿರುವ ರೀತಿ ಮತ್ತು ಅವರ ಮದುವೆಯಲ್ಲಿ ಮ್ಯಾಗಿ ಕೌಂಟರ್ ಏರ್ಪಡಿಸಿರುವುದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
I love my cousin for being so thoughtful & ensuring there is a Maggi counter at her wedding tonight ❣️???? pic.twitter.com/Yu3ObLEYMf
— Somya Lakhani (@somyalakhani) January 18, 2021
Advertisement
ಇನ್ನೂ ಫೋಟೋದಲ್ಲಿ ಮರದ ರ್ಯಾಕ್ಗಳಲ್ಲಿ ಮ್ಯಾಗಿ ಪ್ಯಾಕೆಟ್ಗಳನ್ನು ಇಟ್ಟುಕೊಂಡು, ಸ್ವಲ್ಪ ಮ್ಯಾಗಿಯನ್ನು ಒಲೆ ಮೇಲೆ ಬಾಣಸಿಗ ಬೇಯಿಸುತ್ತಿರುವುದನ್ನು ಕಂಡು ಬಂದಿದೆ. ಈ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ 1 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದಿದೆ.