ದಾವಣಗೆರೆ: ನಾಲ್ಕೈದು ವರ್ಷಗಳಿಂದ ಪ್ರೀತಿಸಿ ಇದೀಗ ತನ್ನನ್ನು ಬಿಟ್ಟು ಬೇರೆ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಯುವತಿಯೋರ್ವಳು ಪ್ರಿಯಕರನ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಕ್ಯಾತನಕೆರೆ ಗ್ರಾಮದಲ್ಲಿ ನಡೆದಿದೆ.
Advertisement
ಕ್ಯಾತನಕೆರೆ ಗ್ರಾಮದ ಹಾಲೇಶ್ ಹಾಗೂ ಚಿತ್ರದುರ್ಗ ಜಿಲ್ಲೆಯ ಓಬಳಾಪುರ ಗ್ರಾಮದ ರೇಣುಕಾ ಸಂಬಂಧಿಕರಾಗಿದ್ದು, ನಾಲ್ಕು ವರ್ಷದಿಂದ ಒಬ್ಬರೊಬ್ಬರನ್ನು ಪ್ರೀತಿಸುತ್ತಿದ್ದರಂತೆ. ಪ್ರಿಯತಮೆ ರೇಣುಕಾಳ ದೂರದ ಸಂಬಂಧಿಯಾಗಿರುವ ಹಾಲೇಶ್ ಲೈಂಗಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗಿ ಮೋಸ ಮಾಡಿದ್ದಾನೆ. ಇದನ್ನೂ ಓದಿ: ಅತ್ಯಾಚಾರಿಗಳಿಂದ ಮಹಿಳೆಯನ್ನು ಪಾರು ಮಾಡಿದ ಎಮ್ಮೆ..!
Advertisement
Advertisement
ಈ ವಿಚಾರ ತಿಳಿದ ಪ್ರಿಯತಮೆ ರೇಣುಕಾ ಕ್ಯಾತನಕೆರೆ ಗ್ರಾಮದಲ್ಲಿರುವ ಹಾಲೇಶ್ ಮನೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ ವಿಷ ಸೇವಿಸಿದ್ದಾಳೆ. ಕೂಡಲೇ ರೇಣುಕಾಳ ಸಹೋದರ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಜೀವನ್ಮರಣರದ ನಡುವೆ ಹೋರಾಡುತ್ತಿದ್ದಾಳೆ. ಇತ್ತ ರೇಣುಕಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟೀಲೇರಿದ್ದಾರೆ. ಇದರ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕ್ಯಾತನಕೆರೆ ಗ್ರಾಮಪಂಚಾಯ್ತಿ ಸದಸ್ಯನಾಗಿರುವ ಹಾಲೇಶ್, ರೇಣುಕಾಳ ಮನೆಗೆ ಆಗಾಗ ಭೇಟಿ ನೀಡ್ತಾ ಮನೆಯಲ್ಲಿದ್ದುಕೊಂಡೆ ನಾನು ಗ್ರಾಮಪಂಚಾಯ್ತಿ ಅಧ್ಯಕ್ಷನಾಗಿದ್ದೇನೆ ಎಂದು ನಂಬಿಸಿದ್ದಾನೆ. ಅಲ್ಲದೆ ಒಂದು ಲಕ್ಷ ಹಣ ಹಾಗೂ ಬಂಗಾರ ಕೂಡ ಪಡೆದಿದ್ದಾನೆ ಎಂದು ರೇಣುಕಾಳ ಸಂಬಂಧಿಕರು ಆರೋಪ ಮಾಡಿದ್ದಾರೆ.
ಹಾಲೇಶ್ ತನ್ನ ತಾಯಿಗೆ ಆರೋಗ್ಯ ಸರಿ ಇಲ್ಲದ ವೇಳೆ ಪ್ರಿಯತಮೆ ರೇಣುಕಾಳನ್ನು ಮನೆಗೆ ಕರೆದುಕೊಂಡು ಹೋಗಿ ಇವಳು ನಿನ್ನ ಸೊಸೆ ಎಂದು ತಾಯಿಯನ್ನು ನಂಬಿಸಿ ಮನೆ ಕೆಲಸ ಮಾಡಿಸುವ ಮೂಲಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆದರೆ ಇದೀಗ ಮದುವೆಯಾಗದೆ ಬೇರೆ ಯುವತಿಯನ್ನು ಮದುವೆಯಾಗಿ ರೇಣುಕಾಳನ್ನು ಮೋಸ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.
ಹಾಲೇಶ್ ನನ್ನು ಕರೆಸಿ ರಾಜಿಪಂಚಾತಿಗೆ ಮಾಡ್ತೀನಿ ಎಂದಿದ್ದ ಕ್ಯಾತನಕೆರೆಯ ಗ್ರಾಮಸ್ಥರು, ಹಾಲೇಶ್ ಬೇರೆ ಮದುವೆಯಾಗಲು ಕಂಕಣಕಟ್ಟಿ ನಿಂತು ಬೇರೆ ಮದುವೆ ಮಾಡಿಸಿರುವುದು ರೇಣುಕಾಳ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯ ಕೊಡಿಸುವಂತೆ ಅಂಗಲಾಚುತ್ತಿದ್ದಾಳೆ.