ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್ ಧವನ್, ವಿರಾಟ್ ಕೊಹ್ಲಿ, ಕೊನೆಯಲ್ಲಿ ಕೆಎಲ್ ರಾಹುಲ್ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್ಗಳ ಗುರಿಯನ್ನು ನೀಡಿದೆ.
ಕೃನಾಲ್ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ರಾಹುಲ್ಗೆ ಜೊತೆಯಾದ ಕೃನಾಲ್ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್ಗಳನ್ನು ಚಚ್ಚಲು ಆರಂಭಿಸಿದರು. ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್ಗಳ ಗಡಿಯನ್ನು ದಾಟಿಸಿದರು.
Advertisement
Advertisement
Advertisement
ಕೃನಾಲ್ ಪಾಂಡ್ಯ 58 ರನ್(31 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದರೆ ರಾಹುಲ್ 62 ರನ್(43 ಎಸೆತ, 4 ಬೌಂಡರಿ, 4 ಸಿಕ್ಸರ್) ಹೊಡೆದರು. ಮಾರ್ಕ್ ವುಡ್ ಎಸೆದ 48ನೇ ಓವರಿನಲ್ಲಿ 28 ರನ್ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್, 13 ರನ್ ಬಂದಿತ್ತು.
Advertisement
ಭಾರತದ ಪರ ರೋಹಿತ್ ಶರ್ಮಾ 28 ರನ್, ಶಿಖರ್ ಧವನ್ 98 ರನ್(106 ಎಸೆತ, 11 ಬೌಂಡರಿ, 2 ಸಿಕ್ಸರ್) ನಾಯಕ ಕೊಹ್ಲಿ 56 ರನ್( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್, ರೋಹಿತ್ 64 ರನ್, ಎರಡನೇ ವಿಕೆಟಿಗೆ ಶಿಖರ್ ಧವನ್, ಕೊಹ್ಲಿ 105 ರನ್ಗಳ ಜೊತೆಯಾಟವಾಡಿದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಮತ್ತು ಪ್ರಸಿದ್ಧ್ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್ ಪಾಂಡ್ಯ ಅವರು ಕೃನಾಲ್ಗೆ ಟೀಂ ಇಂಡಿಯಾದ ಕ್ಯಾಪ್ ನೀಡಿದರು.
This is all heart ????????
A teary moment for ODI debutant @krunalpandya24 post his brilliant quick-fire half-century????????@hardikpandya7 #TeamIndia #INDvENG @Paytm pic.twitter.com/w3x8pj18CD
— BCCI (@BCCI) March 23, 2021
ರನ್ ಏರಿದ್ದು ಹೇಗೆ?
50 ರನ್ – 77 ಎಸೆತ
100 ರನ್ – 139 ಎಸೆತ
150 ರನ್ – 172 ಎಸೆತ
200 ರನ್ – 238 ಎಸೆತ
250 ರನ್ – 278 ಎಸೆತ
300 ರನ್ – 294 ಎಸೆತ
317 ರನ್ – 300 ಎಸೆತ
ODI debut for @krunalpandya24 ????
International debut for @prasidh43 ????#TeamIndia @Paytm #INDvENG pic.twitter.com/Hm9abtwW0g
— BCCI (@BCCI) March 23, 2021