– ಶೀತ, ಚರ್ಮ ರೋಗದಿಂದ ಬಳಲುತ್ತಿರುವ ವೃದ್ಧ
ಮುಂಬೈ: ಎರಡು ವ್ಯಾಕ್ಸಿನ್ಗಳನ್ನು ಮಿಕ್ಸ್ ಮಾಡಬಾರದು ಎಂದು ಹಲವು ಬಾರಿ ವೈದ್ಯರು ಹೇಳಿದ್ದಾರೆ. ಆದರೂ ವೃದ್ಧ ತಮಗೆ ತಿಳಿಯದೆ ಮೊದಲ ಡೋಸ್ ಕೋವ್ಯಾಕ್ಸಿನ್ ಹಾಗೂ ಎರಡನೇ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದಿದ್ದು, ಇದರಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ 72 ವರ್ಷದ ದತ್ತಾತ್ರೇಯ ವಾಘಮಾರೆ ಎರಡು ಬೇರೆ ಬೇರೆ ಲಸಿಕೆಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅನಾರೋಗ್ಯಕ್ಕೆ ಈಡಾಗಿದ್ದು, ಈ ಕುರಿತು ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಿರೀಕ್ಷಿತವಾಗಿದೆ ಎಂದು ಆತಂಕಗೊಂಡಿದ್ದಾರೆ.
Advertisement
Advertisement
ದತ್ತಾತ್ರೇಯ ಅವರು ಹತ್ತಿರದ ಗ್ರಾಮೀಣ ಆಸ್ಪತ್ರೆಯಲ್ಲಿ ಮಾರ್ಚ್ 22ರಂದು ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಬಳಿಕ ಏಪ್ರಿಲ್ 30ರಂದು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದು, ಈ ವೇಳೆ ಕೋವ್ಯಾಕ್ಸಿನ್ ಬದಲಿಗೆ ಸೇರಂ ಇನ್ಸ್ಟಿಟಿಟ್ಯೂಟ್ನ ಕೋವಿಶೀಲ್ಡ್ ಹಾಕಿಸಿಕೊಂಡಿದ್ದಾರೆ. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
Advertisement
ಈ ಕುರಿತು ದತ್ತಾತ್ರೇಯ ಅವರ ಪುತ್ರ ದಿಗಂಬರ್ ಮಾತನಾಡಿ, ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ನಮ್ಮ ತಂದೆಗೆ ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜ್ವರ, ಚರ್ಮ ರೋಗ ಸೇರಿದಂತೆ ವಿವಿಧ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
Advertisement
ಪಾರ್ಟೂರಿನ ಸ್ಟೇಟ್ ಹೆಲ್ತ್ ಕೇರ್ ಸೆಂಟರ್ನಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿಯಾಗಿದೆ. ಕೆಲವು ದಿನಗಳ ಹಿಂದೆ ಎರಡು ವ್ಯಾಕ್ಸಿನ್ ಸರ್ಟಿಫಿಕೇಟ್ ಗಮನಿಸಿದಾಗ ಬೇರೆ ಬೇರೆ ಲಸಿಕೆ ಪಡೆದಿರುವುದು ಗಮನಕ್ಕೆ ಬಂದಿದೆ. ಮೊದಲ ಡೋಸ್ ಸರ್ಟಿಫಿಕೇಟ್ನಲ್ಲಿ ಕೋವ್ಯಾಕ್ಸಿನ್, ಎರಡನೇ ಡೋಸ್ ವ್ಯಾಕ್ಸಿನ್ ಸರ್ಟಿಫಿಕೇಟ್ನಲ್ಲಿ ಕೋವಿಶೀಲ್ಡ್ ಎಂದು ನಮೂದಿಸಲಾಗಿದೆ.
ನಮ್ಮ ತಂದೆ ಅನಕ್ಷರಸ್ಥ, ನನಗೂ ಅಷ್ಟೇನೂ ಓದು ತಿಳಿದಿಲ್ಲ. ಈ ಹಿಂದೆ ಯಾವ ಲಸಿಕೆ ಪಡೆದಿದ್ದರು, ಅದರ ಸರ್ಟಿಫಿಕೇಟ್ ಕೇಳುವುದು, ಮೊದಲ ಡೋಸ್ ಯಾವ ಲಸಿಕೆ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸುವುದು ಆರೋಗ್ಯ ಸಿಬ್ಬಂದಿಯ ಕೆಲಸವಾಗಿದೆ. ತಮ್ಮ ಊರಿನಲ್ಲಿರುವ ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ದೂರಿದ್ದಾರೆ. ಈ ಅಚಾತುರ್ಯ ಹೇಗೆ ಸಂಭವಿಸಿತು ಎಂಬುದನ್ನು ತಿಳಿಯುವ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಕೊರೊನಾ ವ್ಯಾಕ್ಸಿನ್ ಮಿಕ್ಸ್ ಮಾಡುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಸುಸ್ತು, ತಲೆ ನೋವು ಕಂಡುಬಂದಿರುವುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ ಎಂದು ಈ ಹಿಂದೆ ದಿ ಲ್ಯಾನ್ಸೆಟ್ ವರದಿ ಮಾಡಿತ್ತು.