ಚೆನ್ನೈ: ಕ್ರಿಕೆಟ್ ಪ್ರಿಯರು ಎದುರುನೋಡುತ್ತಿರುವ ಬಹು ನಿರೀಕ್ಷಿತ ಐಪಿಎಲ್ 14ನೇ ಆವೃತ್ತಿಗೆ ಇನ್ನು ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ 8 ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಹಾಗೆ ತಂಡಕ್ಕಾಗಿ ಆಡಲು ಬಂದಿರುವ ವಿದೇಶಿ ಆಟಗಾರರು ಕ್ವಾರಂಟೈನ್ ಮುಗಿಸಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ದೈತ್ಯ ಬ್ಯಾಟ್ಸ್ ಮ್ಯಾನ್ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ಕ್ವಾರಂಟೈನ್ ಅವಧಿ ಮುಗಿದ ಸಂಭ್ರಮಕ್ಕೆ ಮೈಕಲ್ ಜಾಕ್ಸನ್ ಅವರಂತೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.
Advertisement
ಪಂಜಾಬ್ ತಂಡದೊಂದಿಗೆ ಸೇರಿಕೊಂಡು ಕ್ವಾರಂಟೈನ್ ಅವಧಿಯನ್ನು ಮುಗಿಸಿರುವ ಗೇಲ್ ತಮ್ಮದೇ ಸ್ಟೈಲ್ನಲ್ಲಿ ಈ ಸಂಭ್ರವನ್ನು ಅಚರಿಸಿದ್ದಾರೆ ಎಂದು ಪಂಜಾಬ್ ಫ್ರಾಂಚೈಸ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.
Advertisement
Advertisement
ಕ್ವಾರಂಟೈನ್ ಅವಧಿ ಮುಗಿದಿದೆ. ಇದೀಗ ಹೊರಬರುತ್ತಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕ್ರಿಸ್ ಗೇಲ್ ಎಂದು ಡ್ಯಾನ್ಸ್ ಮಾಡುತ್ತಿರುವ ಗೇಲ್ ಅವರ ವೀಡಿಯೋ ಒಂದನ್ನು ಫ್ರಾಂಚೈಸ್ ಟ್ವೀಟ್ ಮಾಡಿದೆ ಈ ವೀಡಿಯೋದಲ್ಲಿ ಗೇಲ್ ಡ್ಯಾನ್ಸ್ ಮಾಸ್ಟರ್ ಮೈಕಲ್ ಜಾಕ್ಸನ್ ಅವರಂತೆ ಮೂನ್ವಾಕ್ ಮಾಡುತ್ತಿದ್ದು ಇದನ್ನು ಗಮನಿಸಿರುವ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Advertisement
Quarantine da khatam khel, bahar aa gaye tuhadde favourite – Chris Gayle ????????#IPL2021 #SaddaPunjab #PunjabKings @henrygayle pic.twitter.com/rrDHPZ3lvQ
— Punjab Kings (@PunjabKingsIPL) April 7, 2021
ದೇಶದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿರುವ ಗೇಲ್ ತಮ್ಮ ಸ್ಪೋಟಕ ಆಟದ ಮೂಲಕ ಬಿಗ್ ಸಿಕ್ಸರ್ ಹೊಡೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಕಳೆದ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯದೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
14 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿಯನ್ನು ಎತ್ತಿಹಿಡಿಯದ ಪಂಜಾಬ್ ತಂಡ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಗೇಲ್ ಅವರ ಆಟ ಕೂಡ ಪ್ರಮುಖವಾಗಿದೆ ಈ ಬಾರಿ ಆಸ್ಟ್ರೇಲಿಯಾದ ಬೌಲರ್ ರಿಲೆ ಮೆರೆಡಿತ್, ರಿಚಡ್ರ್ಸಸನ್ ಮತ್ತು ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ ಮ್ಯಾನ್ ಡೇವಿಡ್ ಮಲಾನ್ ಕೂಡ ತಂಡದಲ್ಲಿದ್ದಾರೆ. ಹಾಗಾಗಿ ಈ ಬಾರಿ ಪಂಜಾಬ್ ತಂಡ ಬಲಿಷ್ಠವಾಗಿದೆ.
ಪಂಜಾಬ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧವಾಗಿ ಆಡಲಿದೆ. ಈ ಬಾರಿ ಪಂಜಾಬ್ ತಂಡದ ಯಾವ ರೀತಿ ಉಳಿದ ತಂಡಗಳಿಗೆ ಟಕ್ಕರು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.