ಮುಂಬೈ: ಬೀದಿನಾಯಿಗಳ ದಾಳಿಗೆ ಮೃಗಾಲಯದಲ್ಲಿರುವ ನಾಲ್ಕು ಕೃಷ್ಣಮೃಗಗಳು ಸಾವನ್ನಪ್ಪಿರುವ ಘಟನೆ ಪುಣೆಯ ಕತ್ರಾಜ್ನಲ್ಲಿರುವ ಮೃಗಾಲಯದಲ್ಲಿ ನಡೆದಿದೆ.
ರಾಜೀವ್ ಗಾಂಧಿ ಮೃಗಾಯಕ್ಕೆ ನುಗ್ಗಿದ ಬೀದಿ ನಾಯಿಗಳು ಕೃಷ್ಣಮೃಗಗಳ ಮೇಲೆ ದಾಳಿ ಮಾಡಿವೆ. ಈ ದಾಳಿಯಲ್ಲಿ ನಾಲ್ಕು ಕೃಷ್ಣಮೃಗಗಳು ಸಾವನ್ನಪ್ಪಿದ್ದಾವೆ. ಇನ್ನೊಂದು ತೀವ್ರವಾಗಿ ಗಾಯಗೊಂಡಿದೆ ಎಂದು ಮೃಗಾಲಯದ ನಿರ್ದೇಶಕ ರಾಜ್ಕುಮಾರ್ ಜಾಧವ್ ತಿಳಿಸಿದ್ದಾರೆ.
Advertisement
Advertisement
ಮೃಗಾಲಯದ ಒಂದು ಭಾಗದಲ್ಲಿ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ ನಾಯಿಗಳು ಕಣ್ತಪ್ಪಿಸಿ ಮೃಗಾಯಲದ ಒಳಗೆ ಪ್ರವೇಶ ಮಾಡಿವೆ. ಈ ವೇಳೆ ಕೃಷ್ಣ ಮೃಗಗಳು ಆವರಣದೊಳಗೆ ಸಿಲಿಕಿಕೊಂಡವು. ವನ್ಯಜೀವಿ ಸಂರಕ್ಷಣೆ ಕಾಯ್ದೆ 1ರ ಅಡಿಯಲ್ಲಿ ಕೃಷ್ಣ ಮೃಗಗಳು ಸುರಕ್ಷಿತ ಪ್ರಾಣಿಗಳಾಗಿವೆ. ಆದರೆ ಈ ಬೀದಿ ನಾಯಿಗಳ ದಾಳಿಗೆ ನಾಲ್ಕು ಮೃಗಗಳು ಬಲಿಯಾಗಿವೆ. ಒಂದು ಕೃಷ್ಣಮೃಗ ಗಾಯಗೊಂಡಿದೆ ಎಂದು ತಿಳಿಸಿದ್ದಾರೆ.
Advertisement
ಮೃಗಾಯಲದಲ್ಲಿ ಈವರೆಗೆ ಒಟ್ಟು 34 ಕೃಷ್ಣಮೃಗಗಳಿದ್ದವು. ಇದೀಗ ಬೀದಿ ನಾಯಿಗಳ ದಾಳಿಗೆ ನಾಲ್ಕು ಸಾವನ್ನಪ್ಪಿವೆ. ಮೂವತ್ತು ಉಳಿದಿವೆ. ಈ ಘಟನೆಯ ಬಗ್ಗೆ ಪುಣೆ ಮಹಾನಗರ ಪಾಲಿಕೆಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.
Advertisement