ರಾಯಚೂರು: ನಾರಾಯಣಪುರ ಜಲಾಶಯದಿಂದ 4,06,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ರಾಯಚೂರಿನಲ್ಲಿ ಪ್ರವಾಹ ಪರಸ್ಥಿತಿ ಉಂಟಾಗಿದೆ. ದೇವದುರ್ಗದ ಕೊಪ್ಪರ ಹಳ್ಳದ ಸೇತುವೆ ಮುಳುಗಡೆಯಾಗಿದ್ದು, ಕೊಪ್ಪರ- ಗೂಗಲ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಈ ವೇಳೆ ನೀರಿನಲ್ಲೇ ಕಾರು ಚಲಾಯಿಸಿ ಚಾಲಕ ದುಸ್ಸಾಹಸ ಮಾಡಿದ್ದಾನೆ.
Advertisement
ಕೃಷ್ಣಾ ನದಿಯಲ್ಲಿ ನೀರು ಹೆಚ್ಚಳ ಹಿನ್ನೆಲೆ ಹಳ್ಳಗಳಿಗೂ ನೀರು ನುಗ್ಗಿದೆ. ಹಳ್ಳಗಳು ತುಂಬಿರುವುದರಿಂದ ಸೇತುವೆಗಳು ಮುಳುಗಡೆಯಾಗಿವೆ. ರಸ್ತೆ ಬಂದ್ ಆಗಿದ್ದರೂ ದುಸ್ಸಾಹಸಕ್ಕೆ ಮುಂದಾದ ಕಾರು ಚಾಲಕ, ನೀರಿನಲ್ಲೆ ಕಾರು ಚಲಾಯಿಸಿ ಸೇತುವೆ ದಾಟಿದ್ದಾನೆ.
Advertisement
Advertisement
ಗೂಗಲ್ ನಿಂದ ಕೊಪ್ಪರ ಗ್ರಾಮಕ್ಕೆ ಬರಲು ಅಪಾಯಕಾರಿ ಪ್ರಯಾಣ ಮಾಡಿದ್ದಾನೆ. ಈಗಾಗಲೇ ಕೊಪ್ಪರ ಗ್ರಾಮಕ್ಕೂ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.