ಹಾಸನ: ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮ ಗಾಳಿಗೆ ತೂರಿ ಮೀನು ಹಿಡಿಯಲು ನೂರಾರು ಜನ ಕೆರೆಗೆ ನುಗ್ಗಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಸೋಮನಹಳ್ಳಿ ಗ್ರಾಮದ ಸಮೀಪದ ಕೆರೆಯಲ್ಲಿ ನಡೆದಿದೆ.
Advertisement
ಮೀನು ಹಿಡಿಯೋ ಉಪಕರಣ ಹಿಡಿದು ನೂರಾರು ಮಂದಿ ಕೆರೆಗಿಳಿದು ನಾಮುಂದು, ತಾಮುಂದು ಎಂದು ಮೀನಿನ ಹುಡುಕಾಟದಲ್ಲಿ ತೊಡಗಿದ್ದರು. ಕೆರೆಯ ದಡದ ಮೇಲೂ ಕೊರೊನಾ ನಿಯಮ ಗಾಳಿಗೆ ತೂರಿ ನೂರಾರು ಜನ ನಿಂತಿದ್ದರು. ತಲೆಗೆ 200 ರೂ.ನಂತೆ ಹಣ ಕಟ್ಟಿ ಯಾರು ಬೇಕಾದರೂ ಮೀನು ಹಿಡಿಯೋ ಬಗ್ಗೆ ವೀಡಿಯೋ ವೈರಲ್ ಆಗಿದ್ದರಿಂದ ಇಷ್ಟೊಂದು ಜನ ಬಂದಿದ್ದಾರೆ ಎಂದು ಸ್ಥಳೀಯರು ವಿವರಿಸಿದ್ದಾರೆ.
Advertisement
Advertisement
ಮನೆಯಲ್ಲಿ ಮದುವೆ ಮಾಡಲು ಕೊರೊನಾ ನಿಯಮ ಇದೆ. ಈ ರೀತಿ ಜನ ಸೇರಲು ಬಿಡೋದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ ಸಹ ಇದೆ. ಇದರ ನಡುವೆ ಜನ ಮೀನು ಹಿಡಿಯಲು ಮುಗಿಬಿದ್ದಿದ್ದಾರೆ.