ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಂಬರ್ ಒನ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಮಾನಸಿಕ ಆರೋಗ್ಯದ ಸುಧಾರಣೆಗಾಗಿ ನಾನು ಸರಣಿಯಿಂದ ಹೊರನಡೆದಿರುವುದಾಗಿ ತಿಳಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.
Advertisement
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲದಿನಗಳಷ್ಟೆ ಬಾಕಿ ಉಳಿದುಕೊಂಡಿದೆ. ಈ ನಡುವೆ ಅಂತಿಮ ಕ್ಷಣದಲ್ಲಿ ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಮತ್ತು ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ನಾನು ಹೊರಗುಳಿಯುದಾಗಿ ಸ್ಟೋಕ್ಸ್ ಹೇಳಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಸ್ಟೋಕ್ಸ್ ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.
Advertisement
Advertisement
ಸ್ಟೋಕ್ಸ್ ಅವರ ಈ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಾಕ್ ಆಗಿದ್ದರು ಕೂಡ, ಅವರಿಗೆ ವಿಶ್ರಾಂತಿ ನೀಡಲು ಒಪ್ಪಿಕೊಂಡಿದೆ. ಈ ನಡುವೆ ತಂಡದ ಸಹ ಆಟಗಾರರು ಕೂಡ ಸ್ಟೋಕ್ಸ್ ಅವರ ನಡೆಗೆ ಬೆಂಬಲ ಸೂಚಿಸಿದ್ದಾರೆ.
Advertisement
ಸ್ಟೋಕ್ಸ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿದ್ದರು. ರಾಜಸ್ಥಾನ್ ತಂಡದ ಪರ ಆಡುತ್ತಿದ್ದ ಸ್ಟೋಕ್ಸ್ ಬೆರಳಿನ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದಿದ್ದರು. ಇದೆಲ್ಲದರ ನಡುವೆ ಕೊರೊನಾದಿಂದಾಗಿ ತಂಡದಲ್ಲಿರುವ ಬಯೋ ಬಬಲ್ನಿಂದಾಗಿ ಸ್ಟೋಕ್ಸ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ
ಕ್ರಿಕೆಟ್ನಲ್ಲಿ ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಮಾನಸಿಕ ಖಿನ್ನತೆಗೆ ಒಳಗಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಬಳಿಕ ಇದೀಗ ಮತ್ತೆ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಸ್ಟೋಕ್ಸ್ ಮಾನಸಿಕ ಖಿನ್ನತೆ ಕುರಿತು ಹೇಳಿಕೊಂಡಿದ್ದು ಅದಷ್ಟು ಬೇಗ ಇದರಿಂದ ಹೊರಬರಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.