ಬೆಂಗಳೂರು: ದಾರಿಯಲ್ಲಿ ಕಳೆದುಕೊಂಡಿದ್ದ ಎಟಿಎಂ ಕಾರ್ಡ್ ಮತ್ತು ಹಣವನ್ನು ಯುವಕನಿಗೆ ಹಿಂದಿರುಗಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತುಮಕೂರಿನ ಕೋಡಿಹಳ್ಳಿ ನಿವಾಸಿ ರಾಕೇಶ್ ಪರ್ಸ್ ಕಳೆದುಕೊಂಡಿದ್ದ. ಈತನ ಪರ್ಸ್ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಾಚನಹಳ್ಳಿ ಕಾಲೋನಿಯ ಬಳಿ ಸಿಕ್ಕಿತ್ತು. ಈ ಪರ್ಸ್ನಲ್ಲಿ ಎಟಿಎಂ ಕಾರ್ಡ್, ಡಿಎಲ್ ಮತ್ತು 30 ಸಾವಿರ ಹಣ ಇತ್ತು. ಇದನ್ನ ನೋಡಿದ ಡಾಬಸ್ ಪೇಟೆ ಪೊಲೀಸರು ಯುವಕನನ್ನ ಪತ್ತೆ ಮಾಡಿ ಮತ್ತೆ ಆತನಿಗೆ ಹಿಂದುರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಡಾಬಸ್ ಪೇಟೆ ಪಿಎಸ್ಐ ಮಂಜುನಾಥ್ ಡಿ.ಆರ್. ನೇತೃತ್ವದಲ್ಲಿ ಹಣ ವಾಪಸ್ ಮಾಡಲಾಗಿದೆ. ತಮ್ಮ ವಸ್ತುಗಳು ಮತ್ತೆ ಸಿಕ್ಕಿದ್ದಕ್ಕೆ ರಾಕೇಶ್ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಪೊಲೀಸರ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾಬಸ್ ಪೇಟೆ ಹೆಡ್ ಕಾನ್ಸ್ಟೇಬಲ್ ನಾಗೇಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಗಂಗೇಶ್ಗೆ ಪಿಎಸ್ಐ ಮಂಜುನಾಥ್ ಅಭಿನಂದಿಸಿದ್ದಾರೆ.