ನವದೆಹಲಿ: ಬಿಹಾರದ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಪುತ್ರಿ, ಕಾಮನ್ ವೆಲ್ತ್ ಶೂಟರ್ ಶ್ರೇಯಸಿ ಸಿಂಗ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅರ್ಜನ ಪ್ರಶಸ್ತಿ ವಿಜೇತೆಯಾಗಿರುವ 29 ವರ್ಷದ ಶ್ರೇಯಸಿ ಅವರು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Advertisement
Advertisement
2018ರ ಕಾಮನ್ವೆಲ್ತ್ ಕ್ರೀಡಾಕೂಡದಲ್ಲಿ ಚಿನ್ನದ ಪದಕ ಹಾಗೂ 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಬಿಜೆಪಿ ಸೇರ್ಪಡೆಗೂ ಮುನ್ನ ಶ್ರೇಯಸಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಇದಕ್ಕಾಗಿ ತೇಜಸ್ವಿ ಯಾದವ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿತ್ತು.
Advertisement
ಶ್ರೇಯಸಿ ಅವರು ಬಿಹಾರದ ಅಮರಪುರ ಅಥವಾ ಬಂಕಾದ ಜಮುಯಿ ವಿಧಾನಸಭಾ ಮತಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೇ ಮೈತ್ರಿ ಆಧಾರದ ಹಿನ್ನೆಲೆಯಲ್ಲಿ ಕ್ಷೇತ್ರಗಳ ಹಂಚಿಕೆಯಾದ ಬಳಿಕ ಶ್ರೇಯಸಿ ಅವರು ಯಾವ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ ಎಂಬುವುದು ಖಚಿತವಾಗಲಿದೆ.
Advertisement
ಶ್ರೇಯಸಿ ಅವರ ತಂದೆ ಮಾಜಿ ಸಚಿವ ಬಂಕಾ ಕ್ಷೇತ್ರದ ಸಂಸದರಾಗಿದ್ದ ದಿಗ್ವಿಜಯ್ ಸಿಂಗ್ ಅವರ ಬಳಿಕ 2010ರ ಉಪಚುನಾವಣೆಯಲ್ಲಿ ಅವರ ತಾಯಿ ಪುತುಲ್ ಅವರು ಚುನಾವಣೆ ಎದುರಿಸಿ ಗೆಲುವು ಪಡೆದಿದ್ದರು. ಈ ವೇಳೆ ತಾಯಿಯವರಿಗೆ ಶ್ರೇಯಸಿ ಅವರು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಚುನಾವಣಾ ಆಯೋಗ ಈಗಾಗಲೇ ಘೋಷಣೆ ಮಾಡಿರುವಂತೆ ಮೂರು ಹಂತಗಳಲ್ಲಿ ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದೆ. ನವೆಂಬರ್ 10 ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
Delhi: Shooter Shreyasi Singh, daughter of former union minister late Digvijay Singh, joins Bharatiya Janata Party (BJP) in presence of party leader Bhupendra Yadav. pic.twitter.com/UGq4WFL6jR
— ANI (@ANI) October 4, 2020