ಬೆಂಗಳೂರು: ಸಿನಿಮಾ ಜಗತ್ತಿನಲ್ಲಿ ಸರ್ಜಾ ಕುಟುಂಬ ಎಂದರೇ ಜೇನಿನಗೂಡು ಕುಟುಂಬ ಎಂದೇ ಫೇಮಸ್. ಎಲ್ಲರೂ ಬಹಳ ಅನ್ಯೋನ್ಯತೆಯಲ್ಲಿರುವುದು ಈ ಕುಟುಂಬದ ವಿಶೇಷ. ಇಂದು ಮೃತಪಟ್ಟ ಚಿರಂಜೀವಿ ಸರ್ಜಾ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ತಮ್ಮ ಜೇನುಗೂಡಿನಂತೆ ಇರುವ ಕುಟುಂಬದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ನಟ ಚಿರು ಅವರು ನಟಿ ಮೇಘನಾ ರಾಜ್ ಅವರುನ್ನು ಸುಮಾರು 10 ವರ್ಷಗಳ ಕಾಲ ಪ್ರೀತಿಸಿ 2 ವರ್ಷದ ಹಿಂದೆ ಎಂದರೆ 2018 ಮೇ 3ರಂದು ವಿವಾಹವಾಗಿದ್ದರು. ಸದ್ಯ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.
Advertisement
https://www.instagram.com/p/B_uDQ-pH_yR/
Advertisement
ಕಳೆದ ಮೇ 2ಕ್ಕೆ ಚಿರು ಮತ್ತು ಮೇಘನಾ ಮದುವೆಯಾಗಿ ಎರಡು ವರ್ಷ ತುಂಬಿದ್ದು, ಈ ವೇಳೆ ಲಾಕ್ಡೌನ್ ಇದ್ದ ಕಾರಣ ಚಿರು ಮತ್ತು ಮೇಘನಾ ಹೊರಗೆ ಹೋಗಿರಲಿಲ್ಲ. ಇದರಿಂದ ಮನೆಯಲ್ಲಿ ಇದ್ದು, ಸರಳವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಜೊತೆಗೆ ಮನೆಯಲ್ಲಿ ಚಿರು ಕುಟುಂಬ ಮತ್ತು ಮೇಘನಾ ಕುಟುಂಬ ಒಟ್ಟಿಗೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
Advertisement
https://www.instagram.com/p/B_sMVp5nSKo/
Advertisement
ಈ ಫೋಟೋವನ್ನು ಚಿರು ಮತ್ತು ಮೇಘನಾ ಇಬ್ಬರು ಒಟ್ಟಿಗೆ ತಮ್ಮ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಚಿರು ಅವರು ಫೋಟೋ ಹಾಕಿ ಸರ್ಜಾ ಫ್ಯಾಮಿಲಿ ಎಂದು ಬರೆದುಕೊಂಡಿದ್ದರು. ಇನ್ನೂ ಈ ಫೋಟೋವನ್ನು ಹಂಚಿಕೊಂಡಿರುವ ಮೇಘಾನ ಅವರು, ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು. ಚಿರು ಹಾಗೂ ನಾನು ನಮ್ಮ ಕೈಯಲ್ಲಿ ಆದಷ್ಟೂ ಜನರಿಗೆ ಮೆಸೇಜ್ ಮೂಲಕ ರೀಪ್ಲೇ ಮಾಡಿದ್ದೇವೆ. ನಿಮ್ಮ ಪ್ರೀತಿಗೆ ನಾವು ಋಣಿಯಾಗಿದ್ದೇವೆ ಎಂದು ಬರೆದುಕೊಂಡಿದ್ದರು.
ಚಿರು ಮತ್ತು ಮೇಘನಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿ ಪ್ರೀತಿ ಮಾಡಿದ್ದರು. 2018 ಮೇ 2ರಂದು ಬೆಂಗಳೂರಿನ ಆರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದಕ್ಕೂ ಮೊದಲು ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆ್ಯಂಥೋನೀಸ್ ಫೈರಿ ಚರ್ಚ್ ಮೇಘನಾ ಚಿರಂಜೀವಿ ಸರ್ಜಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.
ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 2:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.