ಉಜಿರೆ: ಮದ್ಯವರ್ಜನ ಶಿಬಿರಗಳಲ್ಲಿ ಮದ್ಯವ್ಯಸನಿಗಳನ್ನು ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತರಾಗಿ ಆರೋಗ್ಯ ಪೂರ್ಣಜೀವನ ನಡೆಸುವಂತೆ ಪ್ರೇರಣೆ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಉಜಿರೆಯಲ್ಲಿ ಅವರು ಬುಧವಾರ 155ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ವ್ಯಸನಮುಕ್ತರಿಗೆ ಹಿತವಚನ ನೀಡಿದರು. ದುಶ್ಚಟಗಳು ವ್ಯಕ್ತಿಯ ಸ್ವಭಾವ, ಸಂಕಲ್ಪ ಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಾನಿ ಮಾಡುವುದರಿಂದ ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
Advertisement
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ನಿರ್ದೇಶಕ ವಿವೇಕ್ ಪಾೈಸ್ ಶುಭಾಶಂಸನೆ ಮಾಡಿದರು.
Advertisement
ರಾಜ್ಯದ 26 ಜಿಲ್ಲೆಗಳಿಂದ 58 ಶಿಬಿರಾರ್ಥಿಗಳು ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾದರು. ಮುಂದಿನ ವಿಶೇಷ ಮದ್ಯವರ್ಜನ ಶಿಬಿರ ಉಜಿರೆಯಲ್ಲಿ ಫೆಬ್ರವರಿ ಒಂದರಿಂದ ಪ್ರಾರಂಭವಾಗಲಿದೆ.