ನವದೆಹಲಿ: ಮದುವೆ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಅಪ್ರಾಪ್ತರು ಸೇರಿದಂತೆ ಈ ಪ್ರಕರಣದಲ್ಲಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮದುವೆಗಳಲ್ಲಿ ಕಳ್ಳತನ ಆಗುತ್ತಿವೆ ಎಂದು ಹಲವಾರು ದಿನಗಳಿಂದ ಕ್ರೈಂ ಬ್ರ್ಯಾಂಚ್ಗೆ ಸಾಕಷ್ಟು ದೂರುಗಳು ಬರುತ್ತಿದ್ದವು. ಪೊಲೀಸ್ ಠಾಣೆಗೆ ಬಂದಿರುವ ದೂರುಗಳ ಆಧಾರದ ಮೇಲೆ ಅಪರಾಧ ವಿಭಾಗವು ತನಿಖೆಯನ್ನು ಪ್ರಾರಂಭಿಸಿತ್ತು. ಆಗ ಮಧ್ಯಪ್ರದೇಶದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
Advertisement
Advertisement
ಪೊಲೀಸರಿಗೆ ಬಂದಿರುವ ಮಾಹಿತಿಯ ಪ್ರಕಾರ ಈ ಗ್ಯಾಂಗ್ನಲ್ಲಿರುವವರು ಪೋಷಕರಿಂದ ಮಕ್ಕಳನ್ನು ಕಳ್ಳತನದ ಕಸುಬು ಮಾಡಲೆಂದೇ ಕರೆದುಕೊಂಡು ಬರುತ್ತಾರೆ. ನಂತರ ಮಕ್ಕಳಿಗೆ ಕಳ್ಳತನದ ತಂತ್ರಗಳನ್ನು ಕಲಿಸಿಕೊಡುತ್ತಿದ್ದರು.
Advertisement
Advertisement
ಮದುವೆಗಳಿಗೆ ಹೇಗೆ ಹೋಗುವುದು, ಹೇಗೆ ಉಡುಗೆ ತೊಡುಗೆ ತೊಡಬೇಕು ಮತ್ತು ಯಾರೊಂದಿಗೆ ಮಾತನಾಡುವುದು, ಹೇಗೆ ಕಳ್ಳತನ ಮಾಡಬೇಕು ಎಂದು ಈ ಎಲ್ಲ ವಿಷಯಗಳಿಗೆ ತರಬೇತಿ ನೀಡುತ್ತಿದ್ದರು. ಕಳ್ಳತನದಲ್ಲಿ ಭಾಗಿಯಾಗಿರುವ ಮಕ್ಕಳ ಪೋಷಕರಿಗೆ 10 ರಿಂದ 12 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದರು.
ಇಲ್ಲಿಯವರೆಗೆ ಅನೇಕ ಪ್ರಕರಣಗಳನ್ನು ಪರಿಹರಿಸಿದ್ದೇವೆ. ಲುಧಿಯಾನ, ಜಿರಾಕ್ಪುರ ಮತ್ತು ಚಂಡೀಗಢದಲ್ಲಿ ನಡೆದ ಅನೇಕ ವಿವಾಹ ಸಮಾರಂಭಗಳಲ್ಲಿ ಆಗಿರುವ ಕಳ್ಳತನದ ಪ್ರಕರಣಗಳು ಇದರಲ್ಲಿ ಸೇರಿಕೊಂಡಿವೆ. ಇದೀಗ ಬಂಧಿತ ಆರೋಪಿಗಳಿಂದ ಕದ್ದ ಹಣದಿಂದ 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಅನೇಕ ಮದುವೆಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ. ಅಪರಾಧ ವಿಭಾಗವು ಅದೇ ವಿಷಯದ ಕುರಿತಾಗಿ ತನಿಖೆ ನಡೆಸುತ್ತಿತ್ತು. ಕಳ್ಳತನ ನಡೆದಿರುವ ಸ್ಥಳಗಳಲ್ಲಿರುವ ಸಿಸಿಟಿವಿ ಮತ್ತು ವಿಡಿಯೋ ತುಳುಕುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಬ್ಬರು ಅಪ್ರಾಪ್ತ ಬಾಲಕರುನ್ನು ಗುರುತಿಸಲಾಯಿತ್ತು ಎಂದು ಡಿಸಿಪಿ ಅಪರಾಧ ವಿಭಾಗ ಭೀಷ್ಮಾ ಸಿಂಗ್ ಹೇಳಿದ್ದಾರೆ.