ಬೆಂಗಳೂರು: ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೀದರ್ ಸಂಸದ ಭಗವಂತ್ ಖೂಬಾ ಅವರು ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದರು.
Advertisement
ಬಿಜೆಪಿ ಕಾರ್ಯಾಲಯ ಪ್ರವೇಶಿಸುವ ಮುನ್ನ ಬಾಗಿಲ ಬಳಿ ಮಂಡಿಯೂರಿ ನೆಲಕ್ಕೆ ತಲೆ ತಾಗಿಸಿ ನಮಸ್ಕರಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಕ್ಷವು ನನಗೆ ಈಗ ಹೆಚ್ಚಿನ ಜವಾಬ್ದಾರಿ ನೀಡಿದೆ. ಆದ್ದರಿಂದ ಪಕ್ಷಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಮನ ಸಲ್ಲಿಸಿದ್ದಾಗಿ ಅವರು ಭಾವಪೂರ್ಣರಾಗಿ ನುಡಿದರು.
Advertisement
ಬಳಿಕ ಕಾರ್ಯಾಲಯದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಅಲ್ಲದೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
Advertisement
ಜಗನ್ನಾಥ ಭವನವನ್ನು ಪ್ರವೇಶಿಸುವ ಮೊದಲು ನಮಸ್ಕರಿಸಿ, ನಂತರ ಭಾರತ ಮಾತೆಯ ಹಾಗೂ ಕರ್ನಾಟಕ ಕೇಸರಿ ಎಂದೇ ಪ್ರಖ್ಯಾತರಾಗಿರುವ ಶ್ರೀ. ಜಗನ್ನಾಥ್ ಜೋಷಿಯವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಾರ್ಪಣೆ ಮಾಡಿದೆ. pic.twitter.com/UvPVJ78YPk
— Bhagwanth Khuba (@bhagwantkhuba) August 13, 2021
Advertisement
ಬೀದರ್ ಸಂಸದರಾಗಿರುವ ಭಗವಂತ್ ಖೂಬಾ ಅವರು ಮೋದಿ ಸಂಪುಟದಲ್ಲಿ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.