ಮಂಗಳೂರು: ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗೋಕುಲ್ ರಾಜ್, ಪವನ್ ಬಂಧಿತ ಆರೋಪಿಗಳು. ಇವರು ಫೇಸ್ ಬುಕ್ನಲ್ಲಿ ಯುವತಿಯರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಬಳಿಕ ಎಫ್.ಬಿ. ಫ್ರೆಂಡ್ಸ್ ಗಳಿಗೆ ಯುವತಿಯರ ನಗ್ನ ಚಿತ್ರ ತಮ್ಮದೆಂದು ಕಳುಹಿಸುತ್ತಿದ್ದರು. ಬಳಿಕ ಮೆಸೇಜ್ ಮಾಡುವವರ ನಗ್ನ ಚಿತ್ರಗಳನ್ನು ಪಡೆಯುತ್ತಿದ್ದರು. ವಂಚನೆ ಮಾಡಿದ ಆರೋಪಿಗಳು ಇದೀಗ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಸಾಕ್ಷಿ ಕಾರ್ತಿಕ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ಬಳಿಕ ಅದೇ ಹೆಸರಿನಲ್ಲಿ ದೂರು ಬಂದಿದೆ ಅಂತ ಯುವಕರಿಗೆ ಕರೆ ಮಾಡಿದ್ದಾರೆ. ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ಹೀಗೆ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ.
Advertisement
ಮೋಸ ಹೋದ ಯುವಕರು ಕದ್ರಿ ಠಾಣೆಗೆ ದೂರು ನಿಡಿದ್ದು, ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.