– ಬಾಲ ಸಹಾಯವಾಣಿಗೆ ಕರೆ ಮಾಡಿ ವಿದ್ಯಾರ್ಥಿ ಅಳಲು
ಜೈಪುರ: ತನ್ನ 11 ವರ್ಷದ ಮಗನಿಗೆ ಭಿಕ್ಷೆ ಬೇಡುವಂತೆ ಒತ್ತಾಯಿಸಿದ್ದು, ಹಣ ಸಂಗ್ರಹಿಸಿಕೊಂಡು ಬಾರದ್ದಕ್ಕೆ ಮನಬಂದಂತೆ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
Advertisement
ತಂದೆಯ ವಿಕೃತ ವರ್ತನೆಯಿಂದ ಬೇಸತ್ತು 11 ವರ್ಷದ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿದ್ದಾನೆ. ನಂತರ ಪಾಪಿ ತಂದೆಯನ್ನು ಬಂಧಿಸಲಾಗಿದೆ. ಬಾಲ ಸಹಾಯವಾಣಿಯ ಸ್ವಯಂ ಸೇವಕರು ಬಾಲಕನನ್ನು ರಕ್ಷಿಸಿದ್ದಾರೆ. ಸೋಮವಾರ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದಾನೆ. ನಂತರ ಸಂಸ್ಥೆಯ ಸದಸ್ಯರು ಗಂಜ್ ಪೊಲೀಸರಿಗೆ ಘಟನೆ ಕುರಿತು ವಿವರಿಸಿದ್ದಾರೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ಮೇಲೆ ಗಾಯದ ಗುರುತುಗಳಾಗಿದ್ದಕ್ಕೆ ಚಿಕಿತ್ಸೆ ನೀಡಿದ್ದಾರೆ.
Advertisement
Advertisement
ತಂದೆ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದ ಅಲ್ಲದೆ ಕೊರೊನಾ ಅವಧಿಯಲ್ಲಿ ಆನ್ಲೈನ್ ತರಗತಿಗೂ ಕಳುಹಿಸಿದ್ದ. ದರೂ ಭಿಕ್ಷೆ ಬೇಡುವಂತೆ ಬಾಲಕನಿಗೆ ಒತ್ತಾಯಿಸುತ್ತಿದ್ದ. 11 ವರ್ಷದ ಬಾಲಕ ಭಿಕ್ಷೆ ಬೇಡಿ 200ರೂ. ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ.
Advertisement
ಭಾನುವಾರ ಆರೋಪಿ ಅಪ್ರಾಪ್ತ ಭಾಲಕನನ್ನು ಕೋಲಿನಿಂದ ಥಳಿಸಿದ್ದು, ಗಲಾಟೆ ಮಾಡದಂತೆ ಬೆದರಿಸಿದ್ದಾನೆ. ಮರುದಿನ ಬಾಲಕ ಬಾಲ ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಬಾಲಕನನ್ನು ರಕ್ಷಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. 11 ವರ್ಷದ ಬಾಲಕನನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಾಳೆ. ತಂದೆ ಮದ್ಯ ವ್ಯಸನಿಯಾಗಿದ್ದಾನೆ. ತಂದೆ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಬಾಲಕ ವಿವರಿಸಿದ್ದಾನೆ. ಅಲ್ಲದೆ ಮದ್ಯ ಸೇವಿಸಲು ಹಣವಿಲ್ಲದ ಕಾರಣ ಆರೋಪಿ ತನ್ನ ಮಗನನ್ನೇ ಭಿಕ್ಷೆ ಬೇಡಲು ಕಳುಹಿಸಿದ್ದಾನೆ.