ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ.
ಗೆಲ್ಲಲು 420 ರನ್ಗಳ ವಿಶ್ವ ದಾಖಲೆಯ ಗುರಿಯನ್ನು ಪಡೆದಿದ್ದ ಭಾರತ 58.1 ಓವರ್ಗಳಲ್ಲಿ192 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.
Advertisement
Advertisement
39 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್ಸನ್ ಬೌಲಿಂಗ್ಗೆ ತತ್ತರಿಸಿತು. ಕೊಹ್ಲಿ ಮತ್ತು ಅಶ್ವಿನ್ ನಡುವೆ 7ನೇ ವಿಕೆಟ್ಗೆ 54 ರನ್ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಜೊತೆಯಾಟ ಸಿಗದ ಕಾರಣ ಪಂದ್ಯವನ್ನು ಭಾರತ ಸೋತಿದೆ.
Advertisement
ಭಾರತದ ಪರ ಶುಭಮನ್ ಗಿಲ್ 50 ರನ್( 83 ಎಸೆತ, 7 ಬೌಂಡರಿ, 1 ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ 72 ರನ್(104 ಎಸೆತ, 9 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
Advertisement
ರೋಹಿತ್ ಶರ್ಮಾ 12, ಚೇತೇಶ್ವರ ಪೂಜಾರ 15, ಅಜಿಂಕ್ಯಾ ರಹಾನೆ 0, ರಿಷಭ್ ಪಂತ್ 11, ವಾಷಿಂಗ್ಟನ್ ಸುಂದರ್ 0, ಅಶ್ವಿನ್ 9, ಶಾಬ್ದಾಜ್ ನದೀಂ 0, ಇಶಾಂತ್ ಶರ್ಮಾ 5 ರನ್ ಹೊಡೆದು ಔಟಾದರು.
ಜ್ಯಾಕ್ ಲೀಚ್ 4 ವಿಕೆಟ್ ಪಡೆದರೆ ಜೇಮ್ಸ್ ಆಂಡರ್ಸನ್ 3 ವಿಕೆಟ್ ಪಡೆದರು. ಜೋಫ್ರಾ ಆರ್ಚರ್, ಡಾಮ್ ಬೆಸ್, ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು.